ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಹಂದಿಯ ಹತ್ಯೆ

ದುಷ್ಕರ್ಮಿಗಳ ಕೃತ್ಯಕ್ಕೆ ಜನರ ಆಕ್ರೋಶ

ಕಾರವಾರ : ಜನರು ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ನಾಡಬಾಂಬ್‌ ಇಟ್ಟು ಸಾಯಿಸಿದ ಘಟನೆ ಶನಿವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ನಡೆದಿದೆ.
ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿಯನ್ನು ಹತ್ಯೆ ಮಾಡಲಾಗಿದೆ. ಊರಿನಲ್ಲಿ ಜನ ನೀಡುತ್ತಿದ್ದ ಆಹಾರ ಸೇವಿಸುತ್ತ ಜನರ ಪ್ರೀತಿ ಗಳಿಸಿದ್ದ ಕಾಡು ಹಂದಿಯನ್ನು ಜನ ಪಂಜುರ್ಲಿ ಎಂದು ನಂಬಿ ಪೂಜೆ ಮಾಡುತ್ತಿದ್ದರು. ಕಾಂತಾರ ಸಿನಿಮಾ ನಂತರ ದೈವದ ಸ್ಥಾನ ಕೊಟ್ಟು ಈ ಕಾಡುಹಂದಿಯನ್ನು ಪೂಜಿಸುತ್ತಿದ್ದರು. ನಿನ್ನೆ ರಾತ್ರಿ ದುಷ್ಕರ್ಮಿಗಳು ಈ ಕಾಡುಹಂದಿಯನ್ನು ಹತ್ಯೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾರವಾರ ಅರಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































error: Content is protected !!
Scroll to Top