ನೈಸ್ ಹಗರಣದ ದಾಖಲೆಗಳು ಮೋದಿ, ಅಮಿತ್ ಷಾಗೆ ಹಸ್ತಾಂತರ
ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವ್ಯವಹಾರದಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಆರೋಪಿಸಿದ್ದಾರೆ.
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್) ಯೋಜನೆಯ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.
ನಾನು ಇಷ್ಟೇ ಆಗಿದೆ ಎಂದು ಲೆಕ್ಕ ಹಾಕಿಲ್ಲ. ಆದರೆ 1,000 ಕೋಟಿ ರೂ.ಗಿಂತ ಹೆಚ್ಚು ಭ್ರಷ್ಟಚಾರ ನಡೆದಿದೆ. ಒಂದು ಹುದ್ದೆಗೆ ಮೂರು-ನಾಲ್ಕು ವರ್ಗಾವಣೆ ಅಥವಾ ಪೋಸ್ಟಿಂಗ್ ಆದೇಶಗಳನ್ನು ನೀಡಲಾಗಿದೆ. ಇದು ಒಂದು ಹಗರಣವಾಗಿದೆ. ಹಣ ಕೂಡ ಹೋಗಿದೆ. ಹಣ ನೀಡಿದ ಹಲವು ಅಧಿಕಾರಿಗಳಿಗೆ ಪೋಸ್ಟಿಂಗ್ ಸಿಕ್ಕಿಲ್ಲ, ಇದು ನಾನು ಹೇಳುತ್ತಿಲ್ಲ, ಅಧಿಕಾರಿಗಳೇ ಇದನ್ನು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೀವನಕ್ಕೆ ಸಾಕಾಗುವಷ್ಟು ಸಂಪತ್ತು ಹೊಂದಿರುವ ಸಚಿವರೊಬ್ಬರು ಇಲಾಖೆಯಲ್ಲಿ ಪೋಸ್ಟಿಂಗ್‌ಗಾಗಿ 10ರಿಂದ 15 ಲಕ್ಷ ರೂ. ಕೇಳುತ್ತಿದ್ದಾರೆ. ಅದನ್ನು ಕೇಳಿ ನನಗೆ ಆಶ್ಚರ್ಯವಾಯಿತು ಎಂದಿದ್ದಾರೆ.
ನೈಸ್ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿಯನ್ನು ಯಾವಾಗ ಭೇಟಿ ಮಾಡುತ್ತೀರಿ ಎಂಬ ಪ್ರಶ್ನೆಗೆ, ನಾನು ಅವರ ಅಪಾಯಿಂಟ್‌ಮೆಂಟ್ ಪಡೆಯಬೇಕಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ದಾಖಲೆಗಳಿವೆ. ನಾನು ಪ್ರಧಾನಿ ಮತ್ತು ಗೃಹ ಸಚಿವರ ಸಮಯವನ್ನು ಕೇಳಿದ್ದು ನಾನು ಅದನ್ನು ಅವರಿಗೆ ಸಲ್ಲಿಸುತ್ತೇನೆ ಎಂದರು.
ಈ ರಾಜ್ಯದಲ್ಲಿ ಹಿಟ್ ಅಂಡ್ ರನ್‌ನಲ್ಲಿ ತೊಡಗಿರುವುದು ಕಾಂಗ್ರೆಸ್ ಎಂದು ಕುಮಾರಸ್ವಾಮಿತಿರುಗೇಟು ನೀಡಿದರು. ಹಿಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿ ‘ಪೇಸಿಎಂ’ ಪ್ರಚಾರ ಮಾಡಿದ ನಂತರ ಅವರು ಒಂದಾದರೂ ಪುರಾವೆ ನೀಡಲು ಸಮರ್ಥರಾಗಿದ್ದಾರೆಯೇ? ಅಧಿಕಾರಕ್ಕೆ ಬಂದರೂ ಯಾವುದೇ ಪುರಾವೆ ನೀಡಿಲ್ಲ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ 250 ಕೋಟಿ ರೂ. ದಿಲ್ಲಿಗೆಗೆ ತಲುಪಿಸಲು ಸೂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.


































