ಉಡುಪಿ: ಜಿಲ್ಲೆಯ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಘಟಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮನವಿ ಸಲ್ಲಿಸಿದೆ. ಮನವಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಸಲಹೆಗಾರ ಲಕ್ಷ್ಮೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಗೀತಾ ಪಾಂಗಾಳ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಜಯ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪಿ, ಉಪಾಧ್ಯಕ್ಷೆ ದೇವಕಿ ಬಿ, ಯುವಘಟಕದ ಉಪಾಧ್ಯಕ್ಷ ರೋಷನ್ ಬಂಗೇರ, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಲಾಲ್, ಮಹಿಳಾ ವಿಭಾಗದ ಕಾರ್ಯದರ್ಶಿ ಅನುಷಾ ಆಚಾರ್ಯ ಪಳ್ಳಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಜ್ಯೋತಿ, ಮಹಿಳಾ ಸಹಸಂಘಟನಾ ಕಾರ್ಯದರ್ಶಿ ಲಕ್ಷ್ಮೀ, ಮಹಿಳಾ ಸಾಂಸ್ಕೃತಿಕ ಸಹಕಾರ್ಯದರ್ಶಿ ಜ್ಯೋತಿ ಬಿ., ಉಡುಪಿ ತಾಲೂಕು ಅಧ್ಯಕ್ಷ ಪ್ರಭಾಕರ್ ರಾಜ್ ಪೂಜಾರಿ, ಉಡುಪಿ ತಾಲೂಕು ಮಹಿಳಾ ವಿಭಾಗದ ಉಪಾಧ್ಯಕ್ಷೆ ಪವಿತ್ರ ಶೆಟ್ಟಿ, ಜಿಲ್ಲಾ ಸದಸ್ಯರಾದ ಸರಿತಾ, ಕವಿತಾ, ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ನಾಮಫಲಕ ಕಡ್ಡಾಯ : ಸಚಿವೆಗೆ ಕರವೇ ಮನವಿ































