ರಫ್ತು ಪ್ರಪಂಚಕ್ಕೆ ಮತ್ತಷ್ಟು ಕೊಡುಗೆ ನೀಡಲು ಪ್ರೇರಣೆ – ರಜತ್ ಕಾಮತ್
ಕಾರ್ಕಳ : ಡ್ರೈಪ್ರೂಟ್ಸ್ ಮತ್ತು ನಟ್ಸ್ ಉತ್ಪಾದಕ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್‌ನ ಕಂಪೆನಿ ಪ್ರತಿಷ್ಠಿತ ರಾಜ್ಯ ರಫ್ತು ಶ್ರೇಷ್ಠ ಪ್ರಶಸ್ತಿ -2021 ನ್ನು ಮುಡಿಗೇರಿಸಿಕೊಂಡಿದೆ.
ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ರಫ್ತು ಶ್ರೇಷ್ಠತಾ ಸಮಿತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿದ್ದು, ಬೋಳಾಸ್ ಆಗ್ರೋ ನಿರ್ದೇಶಕ ರಜತ್ ಕಾಮತ್ ಬೋಳ ಮತ್ತು ಅಂಜನಿ ಕಾಮತ್ ಪ್ರಶಸ್ತಿ ಸ್ವೀಕರಿದರು. ಬಳಿಕ ಮಾತನಾಡಿದ ರಜತ್ ಕಾಮತ್, ಈ ಗುರುತಿಸುವಿಕೆ ರಫ್ತು ಪ್ರಪಂಚಕ್ಕೆ ಮತ್ತಷ್ಟು ಉತ್ತೇಜನ ನೀಡಲು ಹೊಸ ಹಾದಿಗಳನ್ನು ಅನ್ವೇಷಿಸಲು ಪ್ರೇರಣೆಯಾಗಿದೆ. ಅಲ್ಲದೆ, ಇದರಿಂದ ಉದ್ಯಮ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಗುಣಮಟ್ಟದ ಸೇವೆಯನ್ನು ಮುಂದುವರೆಸಲು ನಮ್ಮ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.















































































