ಮಣಿಪುರದ ಇನ್ನೊಂದು ವಿಡಿಯೋ ಬಯಲು

ಮತ್ತೆ ಕುದಿಯ ತೊಡಗಿದೆ ಮಣಿಪುರ

ಹೊಸದಿಲ್ಲಿ : ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ಬೆಳಕಿಗೆ ಬಂದು ಇಡೀ ದೇಶ ಆಘಾತ ಅನುಭವಿಸುತ್ತಿರುವಾಗಲೇ ಇನ್ನೊಂದು ಭೀಕರ ವಿಡಿಯೋ ಬಯವಾಲಗಿದೆ. ಕುಕಿ ಸಮುದಾಯದ ವ್ಯಕ್ತಿಯ ಕತ್ತರಿಸಿದ ತಲೆಯನ್ನು ಬೇಲಿಗೆ ಸಿಕ್ಕಿಸಿರುವ ವಿಡಿಯೋ ಇಂದು ಬೆಳಕಿಗೆ ಬಂದು ಮಣಿಪುರದಲ್ಲಿ ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಡೇವಿಡ್‌ ಥೀಕ್‌ ಎಂದು ಗುರುತಿಸಲಾಗಿದೆ. ಬಿಷ್ಣಾಪುರ ಜಿಲ್ಲೆಯ ಮನೆಯೊಂದರ ಬಿದಿರಿನ ಬೇಲಿಗೆ ತಲೆಯನ್ನು ಸಿಕ್ಕಿಸಲಾಗಿದೆ. ಜು.2ರಂದು ಸಂಭವಿಸಿದ ಗಲಭೆಯಲ್ಲಿ ಥೀಕ್‌ ಸಾವನ್ನಪ್ಪಿದ್ದರು. ಈ ವೀಡಿಯೋ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರ ಮತ್ತೊಮ್ಮೆ ಕುದಿಯ ತೊಡಗಿದೆ. ಇಂದು ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಂಸತ್ತಿನಲ್ಲೂ ಮಣಿಪುರ ಹಿಂಸಾಚಾರ ಪ್ರತಿಧ್ವನಿಸಿ ಕಲಾಪ ಸ್ಥಗಿತಗೊಂಡಿದೆ.































































error: Content is protected !!
Scroll to Top