ಜೈನಮುನಿ ಹತ್ಯೆ ಪ್ರಕರಣ : ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

ಸನ್ಯಾಸಿಗಳ ಕುರಿತು ಸುಳ್ಳು ಸುದ್ದಿ ಹರಡುತ್ತಾರೆ ಎಂದು ಆಕ್ರೋಶ

ಬೆಂಗಳೂರು : ಬೆಳಗಾವಿಯ ಹಿರೇಕೋಡಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಇದು ಅತ್ಯಂತ ಕ್ರೂರ ಘಟನೆ. ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದಾಗ ಮಾತ್ರ ಸಂಪೂರ್ಣ ಸತ್ಯ ಹೊರಬರುತ್ತದೆ. ರಾಜ್ಯದಲ್ಲಿ ಸನ್ಯಾಸಿಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ಸೃಷ್ಟಿ ಮಾಡಿ ಹರಡಲಾಗುತ್ತಿದೆ. ಈ ಮೂಲಕ ಸನ್ಯಾಸಿ ಪರಂಪರೆಯನ್ನು ಅವಮಾನಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ಹೇಳಿದ್ದಾರೆ.
ಜೈನಮುನಿಯನ್ನು ವಿದ್ಯುತ್ ಶಾಕ್ ಕೊಟ್ಟು, ಕೈ-ಕಾಲು ಕತ್ತರಿಸಿ ಕೊಂದು ಬೋರ್‌ವೆಲ್‌ನಲ್ಲಿ ಹಾಕಿದ್ದಾರೆ. ಜೈನ ಸನ್ಯಾಸಿಗಳು ಸರ್ವಸಂಗ ಪರಿತ್ಯಾಗ ಮಾಡ್ತಾರೆ. ಅವರನ್ನು ಹತ್ಯೆ ಮಾಡಿದ್ದು ಹೇಯ ಕೃತ್ಯವಾಗಿದೆ. ಇನ್ನು ಜೈನಮುನಿಗಳು ಕಾಣೆಯಾಗಿದ್ದಾರೆ ಅಂದಮೇಲೂ ಗಂಭೀರವಾಗಿ ತೆಗದುಕೊಂಡಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಎಚ್ಚೆತ್ತರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜೈನಮುನಿಗಳು ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ದರು ಎಂದು ಸುದ್ದಿ ಹಬ್ಬಿಸಲಾಗಿದೆ. ಆರೋಪಿಗಳಿಂದ ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂದು ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಬಿಜೆಪಿ ಶಾಸಕ ಅಭಯ ಪಾಟೀಲ್ ಒತ್ತಾಯಿಸಿದ ಬಳಿಕ ಪೊಲೀಸರು ಆರೋಪಿಯ ಹೆಸರು ಬಹಿರಂಗಪಡಿಸಿದ್ದಾರೆ. ಯಾರೇ ಮಾಡಿದರೂ ಅದು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರ ತನ್ನ ನಿಲುವು ಸರಿ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೊಟ್ಟ ಸಾಲದ ಹಣವನ್ನು ವಾಪಸು ಕೇಳಿದ್ದಕ್ಕೆ ನಾರಾಯಣ ಮಾಳಿ ಮತ್ತು ಹಸನ್‌ ಡಲಾಯತ್‌ ಎಂಬಿಬ್ಬರು ಆರೋಪಿಗಳು ಜೈನಮುನಿಯನ್ನು ಕರೆಂಟ್‌ ಶಾಕ್‌ ಕೊಟ್ಟು ಕ್ರೂರವಾಗಿ ಸಾಯಿಸಿ ಬಳಿಕ ದೇಹವನ್ನು ಕತ್ತರಿಸಿ ಬೋರ್‌ವೆಲ್‌ನೊಳಗೆ ಹಾಕಿದ್ದಾರೆ.















































































error: Content is protected !!
Scroll to Top