ಬುರ್ಖಾ ಧರಿಸಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದ ಪುರುಷ

ಮಹಿಳೆಯರ ಕೈಗೆ ಸಿಕ್ಕಿಬಿದ್ದಾಗ ಗುಟ್ಟುರಟ್ಟು

ಧಾರವಾಡ: ಉಚಿತ ಬಸ್ ಪ್ರಯಾಣದ ಲಾಭ ಪಡೆಯಲು ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಬಂದು ಸಿಕ್ಕಿಬಿದ್ದಿರುವ ಘಟನೆ ಧಾರವಾಡ ಬಸ್‌ ನಿಲ್ದಾಣದಲ್ಲಿ ಸಂಭವಿಸಿದೆ.
ಗುರುವಾರ ಬೆಳಗ್ಗೆ ಧಾರವಾಡದ ಸಂಶಿ ಬಸ್ ನಿಲ್ದಾಣದ ಬಳಿ ಬುರ್ಖಾ ತೊಟ್ಟು ಮಹಿಳೆಯೊಬ್ಬರು ಕುಳಿತಿದ್ದರು. ಆದರೆ ಅಲ್ಲೇ ಕೆಲವು ಮಹಿಳೆಯರಿಗೆ ಈ ಬುರ್ಖಾಧಾರಿ ಮಹಿಳೆಯ ಬಗ್ಗೆ ಸಂಶಯ ಹುಟ್ಟಿಕೊಂಡಿದೆ. ಹೀಗಾಗಿ ಕೆಲವರು ಒಟ್ಟಾಗಿ ಬುರ್ಖಾಧಾರಿಯ ಬಳಿ ಬುರ್ಖಾ ತೆಗೆದು ಮುಖ ತೋರಿಸುವಂತೆ ಹೇಳಿದ್ದಾರೆ. ಆದರೆ ಆರಂಭವದಲ್ಲಿ ಅವರು ಬುರ್ಖಾ ತೆಗೆಯಲು ಒಪ್ಪಿಲ್ಲ. ಬಳಿಕ ವಾಗ್ವಾದ ನಡೆದು ಅಲ್ಲಿ ನೆರೆದಿದ್ದವರ ಒತ್ತಾಯದ ಮೇರೆಗೆ ಅವರು ಬುರ್ಖಾ ತೆಗೆದಿದ್ದು ಈ ವೇಳೆ ಬುರ್ಖಾದಲ್ಲಿರುವುದು ‘ಅವಳಲ್ಲ.. ಅವನು’ ಎಂಬುದು ಗೊತ್ತಾಗಿದೆ.
ಬುರ್ಖಾಧಾರಿ ವ್ಯಕ್ತಿ ಬೆಂಗಳೂರಿನ ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಈ ವ್ಯಕ್ತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿಯ ನಿವಾಸಿ ವೀರಭದ್ರಯ್ಯ ನಿಂಗಯ್ಯ ಮಠಪತಿ ಎಂದು ಆತನ ಬಳಿಯಿದ್ದ ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗಿದೆ. ವೀರಭದ್ರಯ್ಯ ಬಳಿ ಮಹಿಳೆಯ ಆಧಾರ್ ಕಾರ್ಡ್ ಝರಾಕ್ಸ್ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಉಚಿತ ಬಸ್ ಪ್ರಯಾಣಕ್ಕಾಗಿ ಈ ರೀತಿ ಮಹಿಳೆಯರಂತೆ ವೇಷ ತೊಟ್ಟಿರುವ ಕುರಿತು ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ತಾನು ಭಿಕ್ಷಾಟನೆಗಾಗಿ ಈ ರೀತಿ ವೇಷ ತೊಟ್ಟಿರುವುದಾಗಿ ವೀರಭದ್ರಪ್ಪ ಹೇಳಿಕೊಂಡಿದ್ದಾನೆ. ಕುಂದಗೋಳ ಪೊಲೀಸರು ಬುರ್ಖಾಧಾರಿ ಪುರುಷನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.













































































error: Content is protected !!
Scroll to Top