ಆರೋಗ್ಯಾಧಾರ : ಅನನಾಸು

ಸಿಹಿ ಹುಳಿ ಮಿಶ್ರಣವಾಗಿರುವ ಈ ಹಣ್ಣು ಅನೇಕ ರೋಗಗಳಲ್ಲಿ ಉಪಯೋಗಿಸುತ್ತಾರೆ. ಸಂಸ್ಕೃತದಲ್ಲಿ ಇದನ್ನು ಬಹು ನೇತ್ರ ಹಾಗೂ ಕನ್ನಡದಲ್ಲಿ ಇದನ್ನು ಅನನಾಸು ಎಂದು ಕರೆಯುತ್ತಾರೆ. ಇದು ಚಿಕ್ಕ ಗಿಡವಾಗಿದ್ದು ಒಂದು ಅಥವಾ ಒಂದೂವರೆ ಮೀಟರ್ ಉದ್ದ ಬೆಳೆಯುತ್ತದೆ. ಭಾರತದಲ್ಲಿ ಎಲ್ಲೆಡೆ ಬೆಳೆಯುವಂತಹ ಸಸ್ಯವಿದು.
ಇದರ ಗುಣಗಳು- ರುಚಿಯಲ್ಲಿ ಸಿಹಿ ಹಾಗೂ ಹುಳಿ. ಜಿಡ್ಡಿನಂಶದಿಂದ ಕೂಡಿದ್ದು ಗುರು ಆಹಾರವಾಗಿದೆ. ಸ್ವಭಾವದಲ್ಲಿ ಶೀತವೀರ್ಯ. ವಾತ ಹಾಗೂ ಪಿತ್ತ ದೋಷವನ್ನು ಶಮನಗೊಳಿಸುತ್ತದೆ. ಕಫದೋಷವನ್ನು ಹೆಚ್ಚಿಸುತ್ತದೆ.

ಆರೋಗ್ಯ ಲಾಭಗಳು-
• ಇದರ ರಸವನ್ನು ಕಾಮಲೆ ರೋಗದಲ್ಲಿ ನೀಡುತ್ತಾರೆ.
• ಜ್ವರದ ತಾಪವನ್ನು ಕಡಿಮೆ ಮಾಡುತ್ತದೆ.
• ಮಲಬದ್ಧತೆಯನ್ನು ದೂರ ಮಾಡುತ್ತದೆ.
• ಬಾಯಾರಿಕೆಯನ್ನು ನಿವಾರಿಸುತ್ತದೆ.
• ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
• ಕ್ರಿಮಿ ಬಾದೆಯನ್ನು ಹೋಗಲಾಡಿಸುತ್ತದೆ .
• ಬಾಯಿ ರುಚಿಯನ್ನು ಹೆಚ್ಚಿಸುತ್ತದೆ.
• ಅಸಿಡಿಟಿಯನ್ನು ಕಮ್ಮಿ ಮಾಡುತ್ತದೆ.
• ಹೃದಯಕ್ಕೆ ಒಳ್ಳೆಯದು. ಬ್ಲಾಕ್ ಅನ್ನು ಸರಿ ಮಾಡುತ್ತದೆ.
• ಗರ್ಭಕೋಶವನ್ನು ಉತ್ತೇಜಿಸುತ್ತದೆ ಆದ್ದರಿಂದ ಅಧಿಕ ಪ್ರಮಾಣದಲ್ಲಿ ಅನನಸ್ಸನ್ನು ಗರ್ಭಧರಿಸಿದ ಮಹಿಳೆಯರು ಸೇವಿಸಬಾರದು.
• ಮೂತ್ರ ಕೋಶದ ಕಲ್ಲನ್ನು ಪುಡಿ ಮಾಡುವ ಶಕ್ತಿ ಇದಕ್ಕಿದೆ. ಉರಿ ಮೂತ್ರವನ್ನು ಕಡಿಮೆ ಮಾಡುತ್ತದೆ.
• ಸುಸ್ತನ್ನು ನಿವಾರಿಸುತ್ತದೆ.
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಕ್ಯಾನ್ಸರ್ ಅನ್ನು ತಡೆಯುತ್ತದೆ.
• ಎಲುಬನ್ನು ಗಟ್ಟಿಗೊಳಿಸುತ್ತದೆ .
• ಕಣ್ಣಿಗೆ ಒಳ್ಳೆಯದು ದೃಷ್ಟಿ ದೋಷವನ್ನು ಗುಣಪಡಿಸುತ್ತದೆ.
• ವಾಕರಿಕೆಯನ್ನು ಕಡಿಮೆ ಮಾಡುತ್ತದೆ.
• ಶೀತ ನೆಗಡಿಯಲ್ಲಿ ಉಪಯುಕ್ತ. ಅಸ್ತಮಾ ಅಲರ್ಜಿಯಲ್ಲಿ ಇದನ್ನು ಸೇವಿಸಿದರೆ ಒಳ್ಳೆಯದು. ಅನನಾಸನ್ನು ಕರಿಮೆಣಸಿನ ಜೊತೆ ಸೇವಿಸಿದರೆ ಒಳ್ಳೆಯದು.
• ತ್ವಚೆಗೆ ಹಾಗೂ ಕೂದಲಿಗೆ ಒಳ್ಳೆ ಪೋಷಣೆಯನ್ನು ನೀಡುತ್ತದೆ. ತ್ವಚೆಯ ರೋಗಗಳನ್ನು ನಿವಾರಿಸುತ್ತದೆ.
• ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
• ಅರ್ಥ್ ರೈಟಿಸ್ ಅನ್ನು ಗುಣಪಡಿಸುತ್ತದೆ.

ಸೇವಿಸುವ ಪ್ರಮಾಣ- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಗ್ಲಾಸ್ ಹಣ್ಣಿನ ರಸ. ಈಗ ಅನಾನಸು ಹಣ್ಣು ದೊರೆಯುತ್ತಿದೆ ಅದನ್ನು ಸೇವಿಸಿ ಆರೋಗ್ಯದಿಂದಿರಿ.

ಡಾ. ಹರ್ಷಾ ಕಾಮತ್













































































error: Content is protected !!
Scroll to Top