ಬಿಪರ್‌ಜಾಯ್‌ ಚಂಡಮಾರುತಕ್ಕೆ ಇಬ್ಬರು ಬಲಿ; 500ಕ್ಕೂ ಅಧಿಕ ಮರ ಬುಡಮೇಲು

ರಾಜಸ್ಥಾನದತ್ತ ಮುಂದೊತ್ತಿದ ಬಿಪರ್‌ಜಾಯ್‌, ತೀವ್ರತೆ ಇಳಿಮುಖ

ಕಛ್‌ : ನಿರೀಕ್ಷಿಸಿದಂತೆ ನಿನ್ನೆ ರಾತ್ರಿ ಬಿಪರ್‌ಜಾಯ್ ಚಂಡಮಾರುತ 125 ಕಿ.ಮೀ ವೇಗದಲ್ಲಿ ಗುಜರಾತ್ ಕರಾವಳಿಗೆ ಅಪ್ಪಳಿಸಿದೆ. ಮಧ್ಯರಾತ್ರಿ ನಂತರ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ಪ್ರಚಂಡವಾಗಿ ಬೀಸಿದ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 30ಕ್ಕೂ ಹೆಚ್ಚು ಜಾನುವಾರುಗಳು ಗಾಯಗೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಪ್ರಬಲ ಚಂಡಮಾರುತ ಬಿಪರ್‌ಜಾಯ್ ಅಪ್ಪಳಿಸಿದ ನಂತರ ರಾಜ್ಯದ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.
524 ಮರಗಳು ಧರೆಗುರುಳಿದ್ದು ಕೆಲವೆಡೆ ವಿದ್ಯುತ್ ಕಂಬಗಳು ಸಹ ಬಿದ್ದಿವೆ. ಇದರಿಂದಾಗಿ 940 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಚ್ ಜಿಲ್ಲೆಯಲ್ಲಿ ಬಿಪೋರ್​​ಜಾಯ್ ಚಂಡಮಾರುತದ ಅಪ್ಪಳಿಸುವ ಮುನ್ನ ಗುಜರಾತ್‌ನ ಕರಾವಳಿ ಪ್ರದೇಶದಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಿದ ಕಾರಣ ದೊಡ್ಡ ಅನಾಹುತವನ್ನು ತಡೆಯಲು ಸಾಧ್ಯವಾಗಿದೆ.
ಭೂಭಾಗವನ್ನು ಪ್ರವೇಶಿಸುವ ಮೊದಲು ಬಿಪರ್‌ಜಾಯ್‌ ಸುಮಾರು 10 ದಿನ ಅರಬ್ಬಿ ಸಮುದ್ರದಲ್ಲಿ ತಿರುಗಾಡಿತ್ತು. ಗುಜರಾತ್‌ನಿಂದ ಅದು ರಾಜಸ್ಥಾನಕ್ಕೆ ಮುಂದೊತ್ತಿದೆ.

















































error: Content is protected !!
Scroll to Top