ಒಡಿಶಾ ರೈಲು ಅಪಘಾತದ ಹಿಂದೆ ಸಂಚು : ಮಾಜಿ ಅಧಿಕಾರಿಗಳ ಅನುಮಾನ

270 ನಿವೃತ್ತ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ

ಹೊಸದಿಲ್ಲಿ : ಒಡಿಶಾದಲ್ಲಿ ಜೂನ್ 2ರಂದು 288 ಪ್ರಯಾಣಿಕರ ಸಾವಿಗೆ ಕಾರಣವಾದ ಭೀಕರ ರೈಲು ಅಪಘಾತದ ಹಿಂದೆ ಸಂಚು ಇದೆ ಎಂದು ಮಾಜಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಮಾಜಿ ಸೇನಾ ಅಧಿಕಾರಿಗಳು ಅನುಮಾನಿಸಿದ್ದಾರೆ. 270 ಮಂದಿ ಮಾಜಿಗಳು ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಂಚನ್ನು ಬಯಲಿಗೆಳೆಯಲು ಆಗ್ರಹಿಸಿದ್ದಾರೆ.
90ರ ದಶಕ ಮತ್ತು 2000ರ ದಶಕದ ಆರಂಭದಲ್ಲಿ, ದೇಶ ವಿರೋಧಿ ಶಕ್ತಿಗಳ ಟ್ಯಾಂಪರಿಂಗ್‌ನಿಂದಾಗಿ ರೈಲ್ವೆ ಹಳಿಗಳಲ್ಲಿ ಅಪಘಾತಗಳು ಸಂಭವಿಸಿದ್ದನ್ನು ಅವರು ಪ್ರತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಧ್ವಂಸಕ ಕೃತ್ಯದಿಂದ ಹಿಡಿದು ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುವಂತೆ ಮಾಜಿ ಡಿಜಿಪಿ ವಿಕ್ರಮ್ ಸಿಂಗ್ ಮತ್ತು ಮಾಜಿ ಡಿಜಿಪಿ ಎಸ್ಪಿ ವೇದ್ಯಾ ಅವರು ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ಸಲಹೆ ನೀಡಿದ್ದಾರೆ.
ಅಪಘಾತದ ನಂತರ, ಈ ಘಟನೆಯು ರೈಲ್ವೆಯ ನಿರ್ಲಕ್ಷ್ಯದಿಂದ ಸಂಭವಿಸಿದೆಯೇ ಅಥವಾ ಇದು ದೊಡ್ಡ ಪಿತೂರಿಯ ಭಾಗವೇ ಎಂಬ ಪ್ರಶ್ನೆಗಳು ನಿರಂತರವಾಗಿ ಉದ್ಭವಿಸಿದವು. ಈ ಕುರಿತು ಸಂಪೂರ್ಣ ತನಿಖೆ ನಡೆಸಲು ಮೊದಲು ರೈಲ್ವೇ ಸುರಕ್ಷತಾ ಆಯುಕ್ತರು ತನಿಖೆಗೆ ಆದೇಶಿಸಿದರು. ನಂತರ ಸಿಬಿಐ ತನಿಖೆಗೆ ಒಳಪಡಿಸಲು ನಿರ್ಧರಿಸಲಾಯಿತು.
ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ವಿಕ್ರಮ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್‌ಪಿ ವೈದ್ಯ, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಎನ್‌ಐಎ ನಿರ್ದೇಶಕ ವೈಸಿ ಮೋದಿ, ಪಂಜಾಬ್ ಮಾಜಿ ಪೊಲೀಸ್ ಮಹಾನಿರ್ದೇಶಕ ಪಿಸಿ ಡೋಗ್ರಾ, ಮಹಾರಾಷ್ಟ್ರದ ಮಾಜಿ ಮಹಾನಿರ್ದೇಶಕ ಜನರಲ್ ಸೇರಿದಂತೆ 270 ಮಾಜಿ ಅಧಿಕಾರಿಗಳು ದೇಶದ ಭದ್ರತೆಯ ವಿಷಯಗಳಲ್ಲಿ ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.











































































error: Content is protected !!
Scroll to Top