ಬಸ್‌ ಡಿಕ್ಕಿ – ಮೂರು ವಾಹನ ಜಖಂ

ಕಾರ್ಕಳ : ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬಸ್‌ ಸೇರಿದಂತೆ ಆಟೋ ರಿಕ್ಷಾ ಹಾಗೂ ಟೆಂಪೋ ವಾಹನ ಜಖಂಗೊಂಡ ಘಟನೆ ಜೂ. 9 ರಂದು ಪೆರ್ಡೂರಿನಲ್ಲಿ ಸಂಭವಿಸಿದೆ.
ಕಾರ್ಕಳದ ಅಮೀದ್‌ ಮೊಹಿದಿನ್‌ ಹಸನ್‌ ಎಂಬುವವರು ಬಾಡಿಗೆಗಾಗಿ ತಮ್ಮ ಆಟೋ ರಿಕ್ಷಾದಲ್ಲಿ ಕುಕ್ಕೆಹಳ್ಳಿ-ಪೆರ್ಡೂರು ರಸ್ತೆಯಲ್ಲಿ ಹೋಗುತ್ತಾ ಬಾಳೆಬೈಲು ಎಂಬಲ್ಲಿ ಸಾಗುತ್ತಿರುವಾಗ ಕುಕ್ಕೆಹಳ್ಳಿ ಕಡೆಯಿಂದ ಬರುತ್ತಿದ್ದ ಬಸ್‌ ತಿರುವಿನಲ್ಲಿ ಒಮ್ಮೆಲೇ ಬಲಭಾಗಕ್ಕೆ ಚಲಾಯಿಸಿದ ಪರಿಣಾಮ ಬಸ್ಸಿನ ಹಿಂಭಾಗ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಅಲ್ಲದೆ ರಿಕ್ಷಾದ ಹಿಂದಿನಿಂದ ಬರುತ್ತಿದ್ದ ಗೂಡ್ಸ್‌ ಟೆಂಪೊಗೆ ಕೂಡ ಡಿಕ್ಕಿ ಹೊಡೆದಿದ್ದು ಮೂರು ವಾಹನಗಳು ಜಖಂಗೊಂಡಿದೆ. ಅಪಘಾತದ ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಿಳೆಗೆ ಸಣ್ಣ ಗಾಯವಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಮೀದ್‌ ಮೊಹಿದಿನ್‌ ಹಸನ್‌ ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top