ಮುಂಬಯಿಯಲ್ಲಿ ಶ್ರದ್ಧಾ ವಾಲ್ಕರ್ ಮಾದರಿಯ ಕೊಲೆ ಪ್ರಕರಣ
ಮುಂಬಯಿ : ಕಳೆದ ವರ್ಷ ದಿಲ್ಲಿಯಲ್ಲಿ ಅಫ್ತಾಬ್ ಪೂನಾವಾಲ ಎಂಬಾತ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾ ವಾಲ್ಕರ್ ಎಂಬಾಕೆಯನ್ನು ಕೊಂದು ದೇಹವನ್ನು ಕತ್ತರಿಸಿ ಫ್ರಿಜ್‌ನಲ್ಲಿಟ್ಟದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಮುಂಬಯಿಯಲ್ಲೂ ಇದೇ ಮಾದರಿಯ ಘಟನೆ ಸಂಭವಿಸಿದೆ. ವ್ಯಕ್ತಿಯೊಬ್ಬ ಸಂಗಾತಿಯನ್ನು ಕೊಂದು ದೇಹವನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಬರ್ಬರ ಕೃತ್ಯ ಮುಂಬಯಿಯ ಮಿರಾರೋಡ್‌ನಲ್ಲಿ ಸಂಭವಿಸಿದೆ. ಆರೋಪಿ ಮನೋಜ್ ಸಹಾನಿಯನ್ನು (56) ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಲಿವ್ ಇನ್ ಪಾರ್ಟ್ನರ್ ಸಂಗಾತಿಯನ್ನೇ ಬರ್ಬರವಾಗಿ ಸಾಯಿಸಿದ್ದಾನೆ. ಸರಸ್ವತಿ ವೈದ್ಯ (36) ಹತ್ಯೆಯಾಗಿರುವ ಮಹಿಳೆ.
ಮಿರಾರೋಡ್‌ನ ಗೀತಾ ನಗರದಲ್ಲಿರುವ ಆಕಾಶ್ ದೀಪ್ ವಸತಿ ಸಂಕೀರ್ಣದಲ್ಲಿ ಅವರು 5 ವರ್ವಾಷಗಳಿಂದ ಜತೆಯಾಗಿ ವಾಸವಾಗಿದ್ದರು. ಬೊರಿವಲಿಯಲ್ಲಿ ಸಣ್ಣ ಅಂಗಡಿಯೊಂದನ್ನು ಹೊಂದಿರುವ ಮನೋಜ್ ಸಹಾನಿಯ ಮನೆಯೊಳಗಿಂದ ದುರ್ವಾಸನೆ ಬರುತ್ತಿರುವ ಕುರಿತು ವಸತಿ ಕಟ್ನೆಟಡದಲ್ರೆಲಿರುವ ಇತರರು ದೂರಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಬಂದು ಬಾಗಿಲು ತೆರೆದು ಮನೆಯೊಳಗೆ ಹೋದಾಗ ಕೊಳೆತ ಸ್ಥಿತಿಯಲ್ಲಿದ್ದ ದೇಹದ ತುಂಡುಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದವು. ಕೊಲೆ ನಡೆದ ಮೂರ್ನಾಲ್ಕು ದಿನಗಳ ಬಳಿಕ ಇದು ಹೊರಜಗತ್ತಿಗೆ ತಿಳಿದುಬಂದಿದೆ.
ಮನೋಜ್ ಸಹಾನಿ ಮತ್ತು ಸರಸ್ವತಿ ವೈದ್ಯ ಕೆಲವು ವರ್ಷಗಳಿಂದ ಲಿವ್ ಇನ್ ಪಾರ್ಟ್ನರ್ ಆಗಿ ಜತೆಯಾಗಿ ವಾಸವಾಗಿದ್ದರು. ಆದರೆ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗೆ ಜಗಳವಾದಾಗ ಸಹಾನಿ ಮಹಿಳೆಯನ್ನು ಕೊಂದು ಬಳಿಕ ಸಾಕ್ಷಿ ನಾಶ ಮಾಡಲು ದೇಹವನ್ನು ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ್ದ. ಆದರೆ ಇಡೀ ದೇಹವನ್ನು ಬೇಯಿಸಿ ಮುಗಿಸಲು ಅವನಿಂದ ಸಾಧ್ಯವಾಗಿರಲಿಲ್ಲ.