ರೈಲುಗಳ ಓಡಾಟದ ಸಮಯ ಬದಲಾವಣೆ
ಮಂಗಳೂರು : ಕೊಂಕಣ ರೈಲ್ವೆಯಲ್ಲಿ ಜೂ.10ರಿಂದ ಮಳೆಗಾಲದ ವೇಳಾಪಟ್ಟಿ ಜಾರಿಗೆ ಬರಲಿದ್ದು, ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಬಹುತೇಕ ರೈಲುಗಳ ಓಡಾಟದ ಸಮಯ ಬದಲಾಗಲಿದೆ. ಅ. 31ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.
ನಂ. 12620 ಮಂಗಳೂರು ಸೆಂಟ್ರಲ್ ಮುಂಬಯಿ ಲೋಕಮಾನ್ಯ ತಿಲಕ್ ಮತ್ಸ್ಯ ಗಂಧ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 12.45 (ಪ್ರಸ್ತುತ 2.20)ಕ್ಕೆ 1.35 ಗಂಟೆ ಮೊದಲು ಹೊರಡಲಿದೆ. ನಂ. 12619 ಲೋಕಮಾನ್ಯ ತಿಲಕ್ ಟರ್ಮಿನಸ್-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಮಂಗಳೂರು ಸೆಂಟ್ರಲ್‌ಗೆ 2.30 ಗಂಟೆ ತಡವಾಗಿ ಬೆಳಗ್ಗೆ 10.10ಕ್ಕೆ (7.40) ಬರಲಿದೆ.
ನಂ. 12133 ಮುಂಬಯಿ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್‌ಗೆ 2.35 ನಿಮಿಷ ತಡವಾಗಿ ಸಂಜೆ 3.40ಕ್ಕೆ (1.05) ಆಗಮಿಸಲಿದೆ. ನಂ. 12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಮಂಗಳೂರು ಜಂಕ್ಷನ್‌ನಿಂದ ಸಂಜೆ 4.35ಕ್ಕೆ (2.00) 2.35 ಗಂಟೆ ತಡವಾಗಿ ಹೊರಡಲಿದೆ.
ಪ್ರಯಾಣಿಕರು ನ್ಯಾಶನಲ್ ಟ್ರೈನ್ ಎನ್‌ಕ್ವಾಯರಿ ಸಿಸ್ಟಂ app ಅಥವಾ ವೆಬ್‌ಸೈಟ್ ಮೂಲಕ ಹೊಸ ಸಮಯವನ್ನು ತಿಳಿದುಕೊಳ್ಳಬಹುದು. ವೆಬ್‌ಸೈಟ್ : https://enquiry.indianrail.gov.in/mntes/