ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಸಿಗಬೇಕಾದ ಮಾನ್ಯತೆ ಇಂದಿಗೂ ಸಿಕ್ಕಿಲ್ಲ – ಅನುಪಮಾ ಚಿಪ್ಲೂಣ್ಕರ್‌

ಕಾರ್ಕಳ : ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಹೀಗಾಗಿ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಆಗುತ್ತಿಲ್ಲ ಮತ್ತು ಮಹಿಳೆಗೆ ಸಿಗಬೇಕಾದ ಮಾನ್ಯತೆ ಇಂದಿಗೂ ಸಿಕ್ಕಿಲ್ಲ ಎಂದು ಅನುಪಮಾ ಚಿಪ್ಲೂಣ್ಕರ್‌ ಹೇಳಿದರು.
ಅವರು ಶನಿವಾರ ಎಸ್.ವಿ.ಟಿ. ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ರಾಜಕೀಯ ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಉಪನ್ಯಾಸಕಿ ಮಾಲತಿ ಜಿ. ಪೈ ಅವರು ಮಹಿಳೆ ಮತ್ತು ಮನಸ್ಥಿತಿ ವಿಚಾರದ ಕುರಿತು ಮಾತನಾಡಿ, ಪ್ರಸ್ತುತ ಕಾಲಮಾನದಲ್ಲಿ ಮಹಿಳೆ ಪ್ರತಿಭಾ ಸಂಪನ್ನಳಾಗಿರುವುದೇ ಅವಳ ಬೆಳವಣಿಗೆಗೆ ತೊಡಕಾಗಿದೆ. ಆಕೆಯ ನೇರ ಹಾಗೂ ದಿಟ್ಟ ನಡೆಯನ್ನು ಸಹಿಸದೇ ಆಕೆಯ ಜೊತೆಗೆ ಆಕೆಯ ಸಾಮರ್ಥ್ಯವನ್ನು ಮೂಲೆ ಗುಂಪಾಗಿಸುವ ಕುತ್ಸಿತ ಮನಸ್ಥಿತಿಯನ್ನು ಎದುರಿಸಬೇಕಾದ ಪರಿಸ್ಥಿತಿ ಆಕೆಗಿದೆ ಎಂದರು.
ಜಾಗೃತಿ ಸಾಹಿತ್ಯಾಸಕ್ತ ಬಳಗದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ‍ಅಧ್ಯಕ್ಷತೆ ವಹಿಸಿದ್ದರು. ಸುಲೇಚನಾ ಬಿ.ವಿ. ಪ್ರಾರ್ಥಿಸಿ, ಶ್ಯಾಮಲಾ ಗೋಪಿನಾಥ್‌ ಸ್ವಾಗತಿಸಿದರು. ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಡಾ. ಸುಮತಿ ಪಿ. ವಂದಿಸಿದರು.error: Content is protected !!
Scroll to Top