ಬೆಳ್ಮಣ್ಣು : ಜೇಸಿಐ ಘಟಕದ ಕ್ರಿಯಾಶೀಲ ಪೂರ್ವಾಧ್ಯಕ್ಷರು, ಜೇಸಿಐ ವಲಯ ಹದಿನೈದರ ಪೂರ್ವ ವಲಯ ಕಾರ್ಯದರ್ಶಿ, ವಲಯ ತರಬೇತುದಾರರು, ಬೆಳ್ಮಣ್ಣು ಜೇಸಿಐ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಪರಿಸರದ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಚಿಂತಕರು, ನಿವೃತ್ತ ಅಂಚೆ ಕಛೇರಿಯ ಅಧಿಕಾರಿ, ಗೌರವ ಉಪನ್ಯಾಸಕರಾಗಿದ್ದ ಬೆಳ್ಮಣ್ಣು ಗಣಪತಿ ಆಚಾರ್ಯ ಅವರಿಗೆ ಬೆಳ್ಮಣ್ಣು ಜೇಸಿಐ, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಜೂ.3ರಂದು ಬೆಳ್ಮಣ್ಣು ಪಂಚಾಯತ್ ಸಭಾಂಗಣದಲ್ಲಿ ಶ್ರದ್ದಾಂಜಲಿ ಸಭೆ ಜರಗಿತು.
ಈ ಸಂದರ್ಭ ಬೆಳ್ಮಣ್ಣು ಜೇಸಿಐನ ಘಟಕಾಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಕರ್ನಾಟಕ ವಿಶ್ವಕರ್ಮ ಎಶೋಶಿಯೇಶನ್ ಮುಂಬೈ ಇದರ ಪೂರ್ವಾಧ್ಯಕ್ಷ ಜಿ.ಟಿ.ಆಚಾರ್ಯ,ಅಂತರಾಷ್ಟ್ರೀಯ ಕ್ರೀಡಾಪಟು ಬೋಳ ಅಕ್ಷತಾ ಪೂಜಾರಿ, ಜ್ಯೋತಿಷ್ಯರಾದ ಜಿ. ವಾದಿರಾಜ ಆಚಾರ್ಯ, ಯಕ್ಷಗಾನ ಕಲಾವಿದ ಕಾಪು ಜನಾರ್ದನ ಆಚಾರ್ಯ, ನಂದಳಿಕೆ ಗ್ರಾ. ಪಂ. ಸದಸ್ಯೆ ಪದ್ಮಶ್ರೀ ಸತೀಶ್ ಪೂಜಾರಿ, ಜೇಸಿಐ ಪೂರ್ವ ವಲಯಾಧ್ಯಕ್ಷರಾದ ರಾಜೇಂದ್ರ ಭಟ್ ಕೆ., ಚಿತ್ತರಂಜನ್ ಶೆಟ್ಟಿ ಕಾರ್ಕಳ, ಉದಯ ಕುಮಾರ್ ಶೆಟ್ಟಿ, ವಲಯ ಉಪಾಧ್ಯಕ್ಷ ಬೋಳ ಸುಧಾಕರ್ ಆಚಾರ್ಯ, ಬೆಳ್ಮಣ್ಣು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಾಲಕೃಷ್ಣ ರಾವ್, ಜಿ. ಪಂ. ಮಾಜಿ ಸದಸ್ಯೆ ರೇಷ್ಮಾ ಶೆಟ್ಟಿ, ಸುಪ್ರೀತ್ ಶೆಟ್ಟಿ, ಬೆಳ್ಮಣ್ಣು ಜೇಸಿಸ್ ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಜಯಂತ್ ರಾವ್, ನಿಕಟ ಪೂರ್ವಾಧ್ಯಕ್ಷ ತುಕಾರಾಮ ಶೆಟ್ಟಿ, ಕಾರ್ಯದರ್ಶಿ ಸುಧಾಕರ್ ರಾವ್, ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಬಿ.ಎಚ್.ವಸಂತ್ ಆಚಾರ್ಯ, ಸತೀಶ್ ಕುಮಾರ್, ಸುರೇಶ್ ರಾವ್, ವಾಲ್ಟರ್ ಮೊಂತೆರೋ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಮುರಳೀಧರ್ ಜೋಗಿ, ದೀಪಕ್ ಕಾಮತ್, ಸತೀಶ್ ಕೋಟ್ಯಾನ್, ದಿನೇಶ್ ಸುವರ್ಣ, ಸುಭಾಸ್ ಕುಮಾರ್, ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ರವಿರಾಜ್ ಶೆಟ್ಟಿ, ಕೃಷ್ಣ ಪವಾರ್, ಗಣಪತಿ ಆಚಾರ್ಯ ಅವರ ಮಗ ಗೌತಮ್ ಆಚಾರ್ಯ, ಸೊಸೆ ಸುಶ್ಮಿತಾ ಆಚಾರ್ಯ, ಬೋಳ ಮಂಜರಪಲ್ಕೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ, ಪೂವಾಧ್ಯಕ್ಷ ಪುಟ್ಟಣ್ಣ ಆಚಾರ್ಯ, ಕೆದಿಂಜೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಪೂರ್ವಾಧ್ಯಕ್ಷ ಸುರೇಶ್ ಪೂಜಾರಿ ಕಾಸ್ರಬೈಲು, ಜೇಸಿಐ ಮುಂಡ್ಕೂರು ಭಾರ್ಗವ ಘಟಕದ ಪೂರ್ವಾಧ್ಯಕ್ಷ ಯಶವಂತ್ ಆಚಾರ್ಯ, ನಂದಳಿಕೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮತಿಯ ಅಧ್ಯಕ್ಷೆ ವೀಣಾ ಹರೀಶ್ ಪೂಜಾರಿ, ಘಟಕದ ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ, ಮಹಿಳಾ ಜೇಸಿ ಸಂಯೋಜಕಿ ಸೌಜನ್ಯ ಸತೀಶ್ ಕೋಟ್ಯಾನ್ ಉಪಸ್ಥಿತಿತರಿದ್ದರು. ನಿಕಟ ಪೂರ್ವಾಧ್ಯಕ್ಷ ವೀಣೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿ, ಪೂವಾಧ್ಯಕ್ಷ ರವಿರಾಜ್ ಶೆಟ್ಟಿ ವಂದಿಸಿದರು.