ಮೇ 26 : ಬಂಡೀಮಠ ಶ್ರೀ ಮೂಡುಮಹಾಗಣಪತಿ ದೇವಸ್ಥಾನದ 24ನೇ ಪ್ರತಿಷ್ಠಾ ವರ್ಧಂತ್ಯುತ್ಸವ

ಕಾರ್ಕಳ : ಬಂಡೀಮಠ ಶ್ರೀ ಮೂಡುಮಹಾಗಣಪತಿ ದೇವಸ್ಥಾನದ 24ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಮೇ 26 ರಂದು ಜರುಗಲಿದೆ. ಅಂದು ಶ್ರೀ ಮಹಾಗಣಪತಿ ದೇವರಿಗೆ ಪಂಚಾಮೃತ ಅಭಿಷೇಕ, ಪಂಚವಿಂಶತಿ ಕಲಾಶಾಭಿಷೇಕ ಪುರಸ್ಸರ ಸಾನಿಧ್ಯ ಹವನ ನಡೆಯಲಿರುವುದು.
ಬೆಳಿಗ್ಗೆ 6:30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು, ಮಧ್ಯಾಹ್ನ 12:30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಮಹಾಮಂತ್ರಕ್ಷತೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.

error: Content is protected !!
Scroll to Top