ಕಾರ್ಕಳ : ಪಿಯುಸಿ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಶರಣ್ಯ ಎಸ್. ಹೆಗ್ಡೆ ಇಂಗ್ಲೀಷ್ನಲ್ಲಿ 2, ಕನ್ನಡದಲ್ಲಿ 1 ಹೆಚ್ಚುವರಿ ಅಂಕಪಡೆಯುವ ಮೂಲಕ ಒಟ್ಟು 594 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಜಿಲ್ಲೆಗೆ ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ. ಆಕಾಶ್ ಪೈ ಇಂಗ್ಲೀಷ್ನಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 2 ಅಂಕಗಳನ್ನು ಹೆಚ್ಚುವರಿ ಪಡೆಯುವ ಮೂಲಕ ಒಟ್ಟು 593 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ರೋಹಿತ್ ಹೆಗ್ಡೆ ಇಂಗ್ಲೀಷ್ನಲ್ಲಿ 6, ರಸಾಯನಶಾಸ್ತ್ರದಲ್ಲಿ 3 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಒಟ್ಟು 593 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಮನೋಜ್ ಎಂ.ಟಿ. ರಸಾಯನಶಾಸ್ತ್ರದಲ್ಲಿ 19 ಹೆಚ್ಚುವರಿ ಅಂಕ ಪಡೆದು 548 ಅಂಕ ತಮ್ಮದಾಗಿಸಿಕೊಂಡಿದ್ದಾರೆ.
ಮರು ಮೌಲ್ಯಮಾಪನ : ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ರ್ಯಾಂಕ್





































