ಮೇ 25 : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನೂತನ ನಾಗಬಿಂಬ ಹಾಗೂ ರಕ್ತೇಶ್ವರಿ ಪ್ರತಿಷ್ಠೆ

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯು ಕ್ಷೇತ್ರದ ನಾಗಬನದಲ್ಲಿರುವ ನಾಗಬಿಂಬವು ಭಿನ್ನವಾಗಿರುವುದನ್ನು ತಿಳಿದುಕೊಂಡು, ನಾಗಬನದಲ್ಲಿ ದೈವಜ್ಞರಿಂದ ಪ್ರಶ್ನಾಚಿಂತನೆಯ ಮೂಲಕ ವಿಚಾರ ವಿಮರ್ಶೆ ಮಾಡಿ, ನೂತನವಾದ ಮೂಲ ನಾಗಬಿಂಬವನ್ನು ಪ್ರತಿಷ್ಟಾಪಿಸುವುದಾಗಿ ನಿರ್ಣಯಿಸಲಾಗಿದ್ದು, ಆ ಪ್ರಯುಕ್ತ ಮೇ 25 ರಂದು ಬೆಳಿಗ್ಗೆ 8 ಗಂಟೆಗೆ ಪಡುಕುತ್ಯಾರು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಾಗಬನದಲ್ಲಿ ನೂತನ ನಾಗಬಿಂಬ ಹಾಗೂ ರಕ್ತೇಶ್ವರಿ ಪ್ರತಿಷ್ಠೆ ನಡೆಯಲಿರುವುದು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಕೆ. ಉಮೇಶ್‌ ತಂತ್ರಿಯವರ ಆಚಾರ್ಯತ್ವದಲ್ಲಿ, ಪ್ರಧಾನ ಅರ್ಚಕರಾದ ಪುರೋಹಿತ್‌ ವಿಠಲ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ದೇವಸ್ಥಾನದ ಅಂಗ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು, ಕ್ಷೇತ್ರದ 52 ಕೂಡುವಳಿಕೆಯ ಸಮಾಜ ಬಾಂಧವರು ಹಾಗೂ ಸದ್ಭಕ್ತರು ಈ ಸತ್ಕಾರ್ಯದಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































error: Content is protected !!
Scroll to Top