ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಣೆ
ಪತ್ತೂರು : ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮೇ 19 ರಂದು ಪುತ್ತೂರಿಗೆ ಆಗಮಿಸಿ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿದರು.
ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಯತ್ನಾಳ್ ಅಲ್ಲಿಂದ ವಾಹನದಲ್ಲಿ ಪುತ್ತೂರಿಗೆ ಆಗಮಿಸಿದ್ದು ನೇರವಾಗಿ ಪಂಚವಟಿ ಬಿಜೆಪಿ ಕಚೇರಿಗೆ ತೆರಳಿ ಬಳಿಕ ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆ ಆವರಣದಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪಕ್ಷದ ಪ್ರಮುಖರು ಯತ್ನಾಳ್ ಅವರನ್ನು ಸ್ವಾಗತಿಸಿದರು. ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರಿಗೆ ನ್ಯಾಯ ಒದಗಿಸಿಕೊಡುವ ಸಲುವಾಗಿ ಆಗಮಿಸಿರುವ ಯತ್ನಾಳ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.







































