ಕಾರ್ಕಳ : ಸದ್ಯದ ಮುನ್ನಡೆ ಚಿತ್ರಣ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ – ಕಾರ್ಕಳ, ಕಾಪು, ಕುಂದಾಪುರ, ಉಡುಪಿ ಮುನ್ನಡೆ, ಕಾಂಗ್ರೆಸ್ – ಬೈಂದೂರು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ – 6 ಮತ್ತು ಕಾಂಗ್ರೆಸ್ -2 ಸ್ಥಾನಗಳಲ್ಲಿ ಮುಂದಿದೆ. ಕೊಡಗಿನ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿರುವುದೊಂದು ಅಚ್ಚರಿ. ರಾಜ್ಯಲದಲಿ ಒಟ್ಟಾರೆಯಾಗಿ ಕಾಂಗ್ರೆಸ್ 113+ ಮತ್ತು ಬಿಜೆಪಿ 77+ ಸೀಟುಗಳಲ್ಲಿ, ಜೆಡಿಎಸ್ 28 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಸೋಮಣ್ಣ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿ ಮತ ಎಣಿಕಾ ಕೇಂದ್ರದಿಂದ ನಿರ್ಗಮಿಸಿದ್ದಾರೆ. ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ ನಾಗಾಲೋಟ ಮುಂದುವರಿಸಿದ್ದಾರೆ. ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು ಹಿನ್ನಡೆ ಮುಂದುವರಿದಿದೆ. ಡಾ.ಕೆ. ಸುಧಾಕರ್ ಹಿನ್ನಡೆ ಮುಂದುವರಿದಿದೆ. ಸತೀಶ್ ಜಾರಕಿಉಹೊಳಿ 27 ಸಾವಿರ ಮತಗಳ ಅಂತರದಲ್ಲಿ ಮುಂದುವರಿದಿದ್ದು, ಗೆಲುವಿನ ಸನಿಹದಲ್ಲಿದ್ದಾರೆ.
ಉಡುಪಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುನ್ನಡೆ
























