ಬೆಳಗ್ಗೆ 11 ಗಂಟೆಯವರೆಗೆ ಶೇ. 20.94 ಮತದಾನ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಬಿರುಸಿನ ಮತದಾನ

ಬೆಂಗಳೂರು : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಂದುವರಿದಿದ್ದು ಬೆಳಗ್ಗೆ 11 ಗಂಟೆ ವೇಳೆಗೆ ಶೇ. 20.94ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ.19.30ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ. 17.50ರಷ್ಟು, ಬೆಂಗಳೂರು ದಕ್ಷಿಣದಲ್ಲಿ ಶೇ.19.18, ಬೆಂಗಳೂರು ನಗರದಲ್ಲಿ ಶೇ.17.72ರಷ್ಟು ಮತದಾನ ಆಗಿದೆ. ಬಾಗಲಕೋಟೆಯಲ್ಲಿ ಶೇ. 23.44ರಷ್ಟು ಹಾಗೂ ಬೆಳಗಾವಿಯಲ್ಲಿ ಶೇ. 20.76ರಷ್ಟು ಮತದಾನವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಬಿರುಸಿನ ಮತದಾನವಾಗುತ್ತಿರುವ ಕುರಿತು ವರದಿಗಳು ಬಂದಿವೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು ಮೇ 13ರಂದು ಶನಿವಾರ ಫಲಿತಾಂಶ ಪ್ರಕಟವಾಗಲಿದೆ.









































































































error: Content is protected !!
Scroll to Top