ಮತದಾನ ನಮ್ಮ ಹೆಮ್ಮೆ

ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು

ಮತದಾನದ ಮಹತ್ವ ಹಳ್ಳಿಯವರಿಂದ ಕಲಿಬೇಕು

ನಿಮಗಿದು ಗೊತ್ತೆ? ನಮ್ಮ ಹಳ್ಳಿಗಳಿಗಿಂತ ನಗರದಲ್ಲಿ ಮತದಾನ ಪ್ರಮಾಣ ಕಡಿಮೆ. ಹಳ್ಳಿಯ ಜನರು ಉದ್ಯೋಗದ ನಿಮಿತ್ತ ನಗರದ ಕಡೆ ವಲಸೆ ಹೋದರೂ ಮತದಾನದ ಪ್ರಮಾಣದಲ್ಲಿ ಹಳ್ಳಿಯವರು ಮುಂದಿರುವುದು ನಿಜಕ್ಕೂ ಆದರ್ಶನೀಯ. ಶಿಕ್ಷಣ ಇದ್ದವರು ಕಸ ಎಸೆದು ಶಿಕ್ಷಣ ಇಲ್ಲದವರು ಅದನ್ನು ಸ್ವಚ್ಛ ಮಾಡಿದಾಗ ಶಿಕ್ಷಣಕ್ಕೇನು ಬೆಲೆ ಉಳಿದೀತು? ಅಂತಯೇ ಮತದಾನ ಮಾಡದೆ ಎಷ್ಟು ವಿದ್ಯಾವಂತರಾದರೆ ಏನು ಪ್ರಯೋಜನ, ನಮ್ಮ ಹಿರಿಯರು ಮತದಾನದ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿರುವುದು ಇಂದಿನ ಸೋಮಾರಿ ಪ್ರಜೆಗಳಿಗೆ ನಾಚಿಕೆ ಗೇಡಿನ ವಿಷಯ.

ಇಡೀ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ. ಅಂದರೇ ಇಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಕೆಲವರಿಗೆ ತಮ್ಮ ಮತದಾನದ ಹಕ್ಕು ಇನ್ನು ತಿಳಿಯದೆ ಇರುವುದು ನಮ್ಮ ದೇಶದ ವಿಪರ್ಯಾಸ. ಮತ ಚಲಾಯಿಸದಿರು ಕೆಲವು ವ್ಯಕ್ತಿಗಳಿಗೆ ಸರಕಾರ ತಪ್ಪು ಮಾಡಿದಾಗ ಅಥವಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗದಿದ್ದಾಗ ಪ್ರಶ್ನೆ ಮಾಡುವ ಯಾವ ನೈತಿಕ ಹಕ್ಕು ಉಳಿದಿರುವುದಿಲ್ಲ. ಮತದಾನ ಅನ್ನುವುದು ಕೇವಲ ಒಂದು ಕೆಲಸವಲ್ಲ. ಅದೂ ನಮ್ಮ ಹಕ್ಕು, ಕರ್ತವ್ಯ ನಮ್ಮ ಹೆಮ್ಮೆ ಕೂಡಾ ಹೌದು. ಚುನಾವಣೆ ನಡೆದಾಗ ನೂರಕ್ಕೆ ನೂರು ಮತ ಚಲಾಯಿಸುವುದಿಲ್ಲ. ಕೆಲವರಿಗೆ ಅನಸ್ಥೆ, ಯಾರು ಬಂದರೆ ನಮಗೇನು ಎಂಬ ನಿರ್ಲಕ್ಷ್ಯ. ವಿದ್ಯಾವಂತರಾದವರೇ ಮತದಾನ ಪ್ರಕ್ರಿಯೆಯಿಂದ ದೂರ ಇರುವುದು ಸಮಂಜಸವಲ್ಲ. ಎಷ್ಟೋ ಜನರಿಗೆ ತಾವು ಏಕೆ ಮತ ನೀಡುತ್ತಿದ್ದೇವೆಂಬ ವಿಷಯವೇ ತಿಳಿದಿರುವುದಿಲ್ಲ.

ಮತದಾನದಲ್ಲಿ ನಗರ ಪ್ರದೇಶದವರಿಗಿಂತ ಗ್ರಾಮೀಣ ಪ್ರದೇಶದ ಜನರೇ ಮುಂದಿರುವುದು ನಿಜಕ್ಕೂ ಹೆಮ್ಮೆ ಪಡ ಬೇಕಾದ ಸಂಗತಿ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಶೇ.60, 65 ನಡೆದರೂ ಮತದಾನ ನಡೆದಾಗ ಅದನ್ನು ಬಾರೀ ಮತದಾನ ಎಂದು ಭಾವಿಸುವುದು ಹೆಚ್ಚು ಕಮ್ಮಿ ಅರ್ದಷ್ಟು ಮತದಾರರು ಚುನಾವಣಾ ಪ್ರಕ್ರಿಯೆಯಿಂದ ಹೊರಗಿರುವುದು ನಮ್ಮ ಚುನಾವಣಾ ಪದ್ಧತಿಯಲ್ಲಿರುವ ನ್ಯೂನ್ಯತೆಗ ಹಿಡಿದ ಕೈಗನ್ನಡಿ. ಮತದಾರರೆಲ್ಲ ಚುನಾವಣಾ ಮಹತ್ವ ಅರಿತುಕೊಂಡು ಪ್ರಜಾಪ್ರಭುತ್ವಕ್ಕೆ ನ್ಯಾಯವನ್ನು ಒದಗಿಸಿಕೊಡ ಬೇಕು.

✒️ ಶೈಲೇಶ್ ಶೆಟ್ಟಿ ಬೈಲೂರು

































































































error: Content is protected !!
Scroll to Top