ರಾಜ್ಯಾದ್ಯಂತ ಶಾಂತಿಯುತ ಮತದಾನ ಶುರು

2615 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ದಿನ

ಕಾರ್ಕಳ : ರಾಜ್ಯಾದ್ಯಂತ ಮತದಾನ ಶಾಂತಿಯುತವಾಗಿ ಶುರುವಾಗಿದೆ. 224 ಕ್ಷೇತ್ರಗಳಲ್ಲೂ ಬೆಳಗ್ಗೆ ಮತದಾನ ಶುರುವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಮತಯಂತ್ರ ಹೊಂದಾಣಿಕೆ ಮಾಡಿಕೊಳ್ಳಲು ತುಸು ಸಮಯ ಹಿಡಿದ ಕಾರಣ ಕೆಲವು ನಿಮಿಗಳಷ್ಟು ತಡವಾಗಿದ್ದು ಬಿಟ್ಟರೆ ಉಳಿದಂತೆ ಎಲ್ಲೆಡೆ ಯಾವುದೇ ಅಡಚಣೆಯಿಲ್ಲದೆ ಮತದಾನ ಶುಭಾರಂಭವಾಯಿತು. 2615 ಅಭ್ಯರ್ಥಿಗಳ ಭವಿಷ್ಯ ಇಂದು ಮತಯಂತ್ರದೊಳಗೆ ಭದ್ರವಾಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ನೇರ ಹಣಾಹಣಿಯಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್‌ ಬಲವಾಗಿರುವುದರಿಂದ ತ್ರಿಕೋನ ಸ್ಪರ್ಧೆ ಇದೆ. ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸುವ ತವಕದಲ್ಲಿ ಬಿಜೆಪಿ ಇದ್ದರೆ, ದಕ್ಷಿಣದ ಪ್ರಮುಖ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ದಿಟ್ಟ ಹೋರಾಟ ನಡೆಸಿದೆ. ಉಭಯ ಪಕ್ಷಗಳ ಮೇಲಾಟ ಈ ಸಲದ ಚುನಾವಣೆಯನ್ನು ಬಹಳ ಕುತೂಹಲಕಾರಿಯಾಗಿ ಮಾಡಿದೆ.





























































































error: Content is protected !!
Scroll to Top