ಕಾರ್ಕಳ : ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಅವರು ಜೋಡುರಸ್ತೆ, ಜಾರ್ಕಳ, ಕುಕ್ಕುಂದೂರು ಭಾಗದ ಗೇರು ಕಾರ್ಖಾನೆಗಳಿಗೆ ಭೇಟಿ ನೀಡಿ, ಕಾರ್ಮಿಕರನ್ನು ಮಾತನಾಡಿಸಿ ಮತಯಾಚಿಸಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಶಾಸಕನಾಗಿ ಹಾಗೂ ಎರಡು ವರ್ಷ ಸಚಿವನಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕುರಿತು ಮಾತನಾಡಿದರು.
ಅಪಪ್ರಚಾರಕ್ಕೆ ಕಿವಿಕೊಡದಿರಿ
ಕಾರ್ಕಳ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಕಾರ್ಕಳದ ಜನತೆ ಹೆಮ್ಮೆಪಡುವಂತಹ ಕಾರ್ಯ ಮಾಡಲಾಗಿದೆ. ಇದನ್ನೆಲ್ಲ ಸಹಿಸದ ಪ್ರತಿಪಕ್ಷದವರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಆ ಬಗ್ಗೆ ಕಿವಿಕೊಡದೆ, ಅಭಿವೃದ್ಧಿಪರ ಮತ ಚಲಾಯಿಸುವಂತೆ ಸುನಿಲ್ ಕುಮಾರ್ ವಿನಂತಿಸಿದರು. ಕಾರ್ಖಾನೆಯ ಮಾಲೀಕರು, ಆಡಳಿತ ವರ್ಗ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿದ್ದರು.


























