ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

ಅಡಗಿದ್ದ ಉಗ್ರರ ಬೇಟೆ

ಶ್ರೀನಗರ : ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸಾಯಿಸಿ ಎಕೆ 47 ರೈಫಲ್‌ ಮತ್ತು ಪಿಸ್ತೂಲು ವಶಪಡಿಸಿಕೊಂಡಿದೆ.
ವಾಣಿಗಮ್‌ ಪಾಯೀನ್‌ ಖೀರಿ ಎಂಬಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭಿಸಿದ ಬಳಿಕ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಉಗ್ರರು ಗುಂಡು ಹಾರಿಸಿದಾಗ ಎನ್‌ಕೌಂಟರ್‌ ನಡೆದು ಉಗ್ರರು ಬಲಿಯಾಗಿದ್ದಾರೆ. ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬುಧವಾರ ಗಡಿ ನುಸುಳಿ ಬರಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಯವರು ಸಾಯಿಸಿದ್ದಾರೆ.











































































error: Content is protected !!
Scroll to Top