ಗಾಂಧಿ ತತ್ವ ಪರಿಪಾಲಿಸುವ ಕಾಂಗ್ರೆಸ್‌ಗೆ ಬಿಜೆಪಿಯಿಂದ ಸಜ್ಜನಿಕೆಯ ಪಾಠದ ಅಗತ್ಯವಿಲ್ಲ : ಯೋಗೀಶ್‌ ಇನ್ನಾ

ಕಾರ್ಕಳ : ಗಾಂಧಿ ತತ್ವವನ್ನು ಪಾಲನೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಯನ್ನು ಅವಹೇಳನ ಮಾಡುವ ಬಿಜೆಪಿ ಪಕ್ಷದಿಂದ ಸಜ್ಜನಿಕೆಯ ಪಾಠದ ಅಗತ್ಯವಿಲ್ಲ. ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯವರ ಮೇಲೆ ಸುಳ್ಳು ಆರೋಪ ಹಾಕಿ ಅವರ ಕಣ್ಣಲ್ಲಿ ಕಣ್ಣೀರು ಹಾಕಿಸಿ, ಅವರ ಸಮುದಾಯದ ಕುಲ ಕಸುಬನ್ನು ಅವಹೇಳನ ಮಾಡುವುದಲ್ಲದೆ ಗೋಪಾಲ ಭಂಡಾರಿಯವರನ್ನು ಅಪಪ್ರಚಾರದ ಅಸ್ತ್ರಗಳ ಮೂಲಕ ನಿರಂತರವಾಗಿ ಕಾಡಿದ ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಸಜ್ಜನಿಕೆಯ ಪಾಠ ಮಾಡಲು ಯಾವ ನೈತಿಕತೆಯನ್ನು ಹೊಂದಿಲ್ಲ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದಯ್‌ ಕುಮಾರ್‌ ಶೆಟ್ಟಿ ಸಜ್ಜನಿಕೆಯ ಯುನಿವರ್ಸಿಟಿ
ಕಾಂಗ್ರೆಸ್ ಅಭ್ಯರ್ಥಿ ಉದಯ್‌ ಕುಮಾರ್‌ ಶೆಟ್ಟಿ ಸಾತ್ವಿಕ ಸ್ವಭಾವದ ಸರಳ ಸಜ್ಜನ ವ್ಯಕ್ತಿ. ಬಡಜನತೆಗೆ ನೆರವು, ಧಾರ್ಮಿಕ ಕ್ಷೇತ್ರಗಳಿಗೆ ಕೊಡುಗೆ ಹೀಗೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಅವರು ಸಜ್ಜನಿಕೆಯ ಯುನಿವರ್ಸಿಟಿ. ಅಂತಹ ಸಜ್ಜನನಿಗೆ ಬಿಜೆಪಿಯಿಂದ ಸಜ್ಜನಿಕೆಯ ಟ್ಯೂಷನ್ ಪಾಠದ ಅಗತ್ಯವಿಲ್ಲ. ನಿಮ್ಮ ಈ ವರ್ತನೆಗೆ ಕಾರ್ಕಳದ ಜನರೇ ಉತ್ತರಿಸುತ್ತಾರೆ ಎಂದು ಲೇವಡಿ ಮಾಡಿದರು.







































































error: Content is protected !!
Scroll to Top