ಇಂದು ಕರಾವಳಿಯಲ್ಲಿ ಮೋದಿ ಗರ್ಜನೆ

ಮೂಲ್ಕಿಯಲ್ಲಿ ಬೃಹತ್‌ ಸಮಾವೇಶ

ಮಂಗಳೂರು : ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಇಂದು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಮೂಲ್ಕಿ ಸಮೀಪದ ಕೊಲ್ನಾಡಿನಲ್ಲಿ ಹೆದ್ದಾರಿಗೆ ಒತ್ತಿಕೊಂಡಿರುವ ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ಪ್ರಧಾನಿಯ ಬೃಹತ್‌ ಪ್ರಚಾರ ಸಭೆ ನಡೆಯಲಿದೆ. ಇದಕ್ಕಾಗಿ ಪೂರ್ಣ ತಯಾರಿ ನಡೆಸಲಾಗಿದೆ.
ಕಾರ್ನಾಡಿನ ಗುಂಡಾಲು ಎಂಬಲ್ಲಿ ಬೆಳಗ್ಗೆ 10.30ಕ್ಕೆ ಸಮಾವೇಶ ನಡೆಯಲಿದ್ದು, ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಬಜಪೆಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಸಮಾವೇಶ ಸ್ಥಳಕ್ಕೆ ಆಗಮಿಸುವರು.
ಕರಾವಳಿಯಲ್ಲಿಯೂ ದಾಖಲೆ ಸಂಖ್ಯೆಯ ಸ್ಥಾನಗಳಲ್ಲಿ ಜಯಗಳಿಸಬೇಕೆಂಬ ಬಿಜೆಪಿ ಹೋರಾಟಕ್ಕೆ ಮೋದಿ ಆಗಮನ ಹೊಸ ಶಕ್ತಿ ನೀಡುವ ಸಾಧ್ಯತೆಯಿದೆ. ಕರಾವಳಿಗೆ ಪ್ರತಿ ಬಾರಿ ಮೋದಿ ಆಗಮಿಸಿದಾಗಲೂ ದಾಖಲೆ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಈ ಬಾರಿಯೂ 2.5ರಿಂದ 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸುವವರಿಗೆ ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.

ಎಸ್‌ಪಿಜಿ ನಿಗಾ

ಸಮಾವೇಶ ನಡೆಯುವ ಮೈದಾನ, ಹೆಲಿಪ್ಯಾಡ್‌ ಎಲ್ಲವನ್ನೂ ಎಸ್‌ಪಿಜಿ ಯವರು ತಮ್ಮ ಅಧೀನಕ್ಕೆ ಪಡೆದಿದ್ದು ಪ್ರಧಾನಿ ಆಗಮನ ಸೇರಿದಂತೆ ಭದ್ರತಾ ಲೋಪವಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಪೊಲೀಸರ ತಂಡ ಮೂಲ್ಕಿಯ ಉದ್ದಕ್ಕೂ ಬೀಡುಬಿಟ್ಟಿದೆ. ಹೆಲಿಪ್ಯಾಡ್‌ನಿಂದ ಮೋದಿಯವರು ಕಾರಿನಲ್ಲಿ ಬರಲಿದ್ದು, ಹೆದ್ದಾರಿಯ ಉದ್ದಕ್ಕೂ ತಡೆಬೇಲಿ ನಿರ್ಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕರಾವಳಿ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ. ಬಿಜೆಪಿಯಿಂದ ಇಲ್ಲಿಯವರೆಗೆ ನಡೆದ ಪ್ರಚಾರಕ್ಕಿಂತಲೂ ಇನ್ನು ಮುಂದೆ ನಡೆಯುವ ಪ್ರಚಾರದ ಹುರುಪಿಗೂ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಬದಲಾಗಲಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳೀಗೆ ಪೊಲೀಸರು ಈಗಾಗಲೇ ಪರ್ಯಾಯಯ ಮಾರ್ಗಗಳನ್ನು ಸೂಚಿಸಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದ ತನಕ ಮಂಗಳೂರು-ಉಡುಪಿ ನಡುವೆ ಸಂಚರಿಸುವವರು ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗಿದೆ.
ಮೂಲ್ಕಿಯ ಸಮಾವೇಶದ ಬಳಿಕ ಮೋದಿ ಉತ್ತರ ಕನ್ನಡದ ಅಂಕೋಲಾಕ್ಕೆ ತೆರಳಲಿದ್ದಾರೆ.











































































error: Content is protected !!
Scroll to Top