ನಾಟಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕಾರ್ಕಳ : ಆರ್ಕಿಟೆಕ್ಚರ್‌ ಇಂಜಿನಿಯರಿಂಗ್‌ ಕೋರ್ಸ್‌ಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ ಎಪ್ರಿಲ್‌ನಲ್ಲಿ ನಡೆಸಿದ ಪ್ರಥಮ ಹಂತದ ನಾಟಾ (ನ್ಯಾಷನಲ್‌ ಆಪ್ಟಿಟ್ಯುಡ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌) ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ವರುಣ್‌ ಜಿ. ನಾಯಕ್‌ 127, ದೀಕ್ಷಾ ಪಾಂಡು 123, ಸ್ಪರ್ಶ ಪಾರ್ಶ್ವನಾಥ್‌ 119, ಧರಿನಾಥ್‌ ಕುಂಬಾರ್‌ 118, ಸಹನಾ ಎನ್‌. ಸಿ 116 ಅಂಕ ಗಳಿಸಿದ್ದಾರೆ.

ಪರೀಕ್ಷೆಗೆ ಒಟ್ಟು 31 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಅನ್ವಿತಾ ಕೆ., ಸ್ವಸ್ತಿಕ್‌ ಕೆ. ಭಟ್‌, ಅನುಷಾ ಐನಾಪುರ, ಸಂತೃಪ್ತಿ, ಚಿರಾಗ್‌ ವಿ. ಶೆಟ್ಟಿ, ಗುರುಲಿಂಗಯ್ಯ ಎಸ್‌. ಕಂಬಳಿಮಠ್‌, ಶ್ರವಣ್‌ ಎಸ್‌., ಸಂಜಯ್‌ ಎಸ್‌., ಪಂಕಜ್‌ ಜೈ. ಪ್ರಸಾದ್‌, ಪ್ರೇಕ್ಷಾ, ನೇಹಾ ಮಯ್ಯ, ಪನ್ವಿತ್‌ ಜಿ. ಎನ್‌, ಚಿನ್ಮಯಿ ಎಸ್‌. ಶೆಟ್ಟಿ ಇವರು ಉತ್ತಮ ಅಂಕಗಳಿಸಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ತೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಪಿಆರಒ ಲಿಶನ್‌ ಗೌಡ, NATA ಸಂಯೋಜಕರಾದ ಸುಮಂತ್‌ ದಾಮ್ಲೆ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗ ಅಭಿನಂದಿಸಿದ್ದಾರೆ.
ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪಿಯುಸಿ ಪ್ರಥಮ ವರ್ಷದಿಂದಲೇ ವಿವಿಧ ಕೋರ್ಸ್‌ಗಳಿಗೆ ಕ್ರಿಯೇಟಿವ್‌ ಲರ್ನಿಂಗ್‌ ಕ್ಲಾಸಸ್‌ ನಡಿಯಲ್ಲಿ ತರಬೇತಿ ನೀಡಲಾಗುತ್ತಿದೆ.





































































error: Content is protected !!
Scroll to Top