ಸ್ಕೂಟರ್‌ಗೆ ಕಾರು ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ : ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ನಿಟ್ಟೆ ದೂಪದಕಟ್ಟೆ ಜಂಕ್ಷನ್‌ನಲ್ಲಿ ಮೇ 1 ರಂದು ಸಂಭವಿಸಿದೆ. ಮಂಜುನಾಥ ಆಚಾರ್ಯ ಎಂಬುವವರು ತನ್ನ ಮಗ ಯೋಗೀಶ್‌ ಆಚಾರ್ಯ ಅವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಬೆಳ್ಮಣ್‌ ಕಡೆಗೆ ಸಾಗುತ್ತಿದ್ದಾಗ ಬೆಳ್ಮಣ್‌ ಕಡೆಯಿಂದ ಬರುತ್ತಿದ್ದ ಕಾರು (KA-02-AF-7493) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದು, ಮಂಜುನಾಥ ಅವರ ಕಾಲಿಗೆ ಗಾಯವಾಗಿದೆ. ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡಾಗ ವೈದ್ಯರು ಪರಿಶೀಲಿಸಿ ಮೂಳೆ ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top