ಆಯಿಲ್‌ ಪೈಪ್‌ ಸ್ಫೋಟ : ನಾಲ್ವರಿಗೆ ಗಾಯ

ಮಂಗಳೂರು ಪೋರ್ಟ್‌ನಲ್ಲಿ ನಡೆದ ಘಟನೆ

ಮಂಗಳೂರು : ಬಿಟುಮೆನ್ ಆಯಿಲ್ ಫಿಲ್ಲಿಂಗ್ ವೇಳೆ ಪೈಪ್‌ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಮಂಗಳೂರಿನ ನವಮಂಗಳೂರು ಬಂದರಿನಲ್ಲಿ ಹಡಗಿನಿಂದ ನೇರವಾಗಿ ಟ್ಯಾಂಕರ್‌ಗೆ ಬಿಟುಮೆನ್ ಆಯಿಲ್ ವರ್ಗಾಯಿಸುವಾಗ ಪೈಪ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ಹಡಗಿನಲ್ಲಿ ಬಂದ ಬಿಟುಮೆನ್ ಆಯಿಲ್ ಅನ್ನು ಟ್ಯಾಂಕಿಗೆ ಮೊದಲು ವರ್ಗಾಯಿಸುವುದು ನಿಯಮ. ಆಯಿಲ್‌ ಅನ್ನು ಟ್ಯಾಂಕರ್‌ಗೆ ವರ್ಗಾಯಿಸುವ ವೇಳೆ ಪೈಪ್ ಸ್ಫೋಟಗೊಂಡು ಆಯಿಲ್ ಕಾರ್ಮಿಕರ ಮೈ ಮೇಲೆ ಬಿದ್ದಿದ್ದು ತಕ್ಷಣವೇ ಅವರನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.













































\















error: Content is protected !!
Scroll to Top