ಜೋಡುರಸ್ತೆಯಲ್ಲಿ ಬೃಹತ್‌ ಬಟ್ಟೆ ಮಳಿಗೆ ಟ್ರೆಂಡ್ಸ್‌ ಉದ್ಘಾಟನೆ

ಕಾರ್ಕಳ : ಬೆಳೆಯುತ್ತಿರುವ ಜೋಡುರಸ್ತೆ ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕಟ್ಟಡದಲ್ಲಿ ರಿಲಾಯನ್ಸ್‌ನ ಟ್ರೆಂಡ್ಸ್‌ ಮಳಿಗೆ ಶುಕ್ರವಾರ ಶುಭಾರಂಭಗೊಂಡಿತು. ಉದ್ಯಮಿ ಡಿ.ಆರ್.‌ ರಾಜು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಕುಕ್ಕುಂದೂರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಅನಿಲ್‌ ಪೂಜಾರಿ, ಪಂಚಾಯತ್‌ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ರಮಾನಾಥ್‌ ನಾಯಕ್‌, ವಿನ್ಯಾಸ ಟ್ರೇಡರ್ಸ್‌ ಮಾಲಕ ನರಸಿಂಹ ಪೈ, ಉದ್ಯಮಿಗಳಾದ ವೃಷಭರಾಜ್‌ ಕಡಂಬ, ಸಂಪತ್‌ ಜೈನ್‌, ಸಂದೀಪ್‌ ಶೆಟ್ಟಿ, ಫೆಲಿಕ್ಸ್‌ ಮಥಾಯಿಸ್‌, ಪುರಸಭಾ ಮಾಜಿ ಅ‍ಧ್ಯಕ್ಷ ಸುಬಿತ್‌ ಎನ್.ಆರ್.‌, ಸದಾಶಿವ ದೇವಾಡಿಗ, ಸಿದ್ದಿ ಮೋಟಾರ್ಸ್‌ ಮಾಲಕ ಸಚ್ಚಿದಾನಂದ ಶೆಟ್ಟಿ, ಕೆಎಂಇಎಸ್‌ ವಿದ್ಯಾಸಂಸ್ಥೆ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರು, ನ್ಯಾಯವಾದಿ ಶೇಖರ್‌ ಮಡಿವಾಳ್‌, ಎಲ್‌ಐಸಿ ಸಲಹೆಗಾರ ಹರ್ಮನ್‌ ಕ್ಯಾಸ್ತಲಿನೋ, ಕಟ್ಟಡ ಪಾಲುದಾರರಾದ ನವೀನ್‌ ದೇವಾಡಿಗ, ಮಧುರಾಜ್‌ ಶೆಟ್ಟಿ, ಶಾಕಿರ್‌ ಹುಸೇನ್‌, ಸುಧಾಕರ್ ಶೆಟ್ಟಿ ಮುಡಾರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೃಹತ್‌ ಮಳಿಗೆ
ಮೂರು ಅಂತಸ್ತಿನ ಮಳಿಗೆಯಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಪತ್ಯೇಕ ಶೋರೂಂ ಇದೆ. ಅನುಕೂಲಕರ ವಾತಾವರಣ, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆಯೊಂದಿಗೆ ಎಲ್ಲ ರೀತಿಯ ಬಟ್ಟೆಗಳು ಲಭ್ಯವಿದೆ. ಶುಭಾರಂಭದ ಆಫರ್‌ ಆಗಿ ಗ್ರಾಹಕರಿಗೆ ಗಿಫ್ಟ್‌ ಹ್ಯಾಂಪರ್‌ ನೀಡಲಾಗುತ್ತಿದೆ.











































error: Content is protected !!
Scroll to Top