ಹೆಬ್ರಿ : ರಾಮನವಮಿ ಆಚರಣೆ

ಹೆಬ್ರಿ : ಪಿ.ಆರ್.ಎನ್. ಅಮೃತಭಾರತಿ ಮಾತೃಮಂಡಳಿ ವತಿಯಿಂದ ಬಡಾಗುಡ್ಡೆಯ ಕೊರಗರ ಕಾಲನಿಯಲ್ಲಿ ರಾಮನವಮಿ ಆಚರಿಸಲಾಯಿತು. ಹೆಬ್ರಿ ಅನಂತಪದ್ಮನಾಭ ದೇವಸ್ಥಾನದಿಂದ ಶ್ರೀರಾಮದೇವರ ಭಾವಚಿತ್ರ, ದೀಪದೊಂದಿಗೆ ಭಜನೆ ಮಾಡಿಕೊಂಡು 30 ಮನೆಗೆ ತೆರಳಲಾಯಿತು. ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ, ಅನಂತಪದ್ಮನಾಭ ದೇವಸ್ಥಾನದ ಅರ್ಚಕ ರಾಮಕೃಷ್ಣ ಆಚಾರ್ಯ, ಶೋಧನ್ ಹೆಗ್ಡೆ, ಮಾತೃ ಮಂಡಳಿ ಅಧ್ಯಕ್ಷೆ ವೀಣಾ ಆರ್. ಭಟ್ , ಸುಪ್ರೀತಾ ಶೆಟ್ಟಿ, ಮಾಲತಿ ಹಾಗೂ ಮಾತೆಯರು ಬಚ್ಚಪ್ಪು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು, ಅಮೃತ ಭಾರತಿ ವಿದ್ಯಾಲಯದ ಮುಖ್ಯಸ್ಥೆ ಅಪರ್ಣಾ ಆಚಾರ್ ಮೊದಲಾದವರು ಪಾಲ್ಗೊಂಡರು.











































error: Content is protected !!
Scroll to Top