10 ಫಲಾನುಭವಿಗಳಿಗೆ ಮನೆ ದುರಸ್ತಿಗೆ ಚೆಕ್ ಹಸ್ತಾಂತರ
ಕಾರ್ಕಳ: ಮಿಯಾರು ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 220 ಕುಟುಂಬಗಳಿಗೆ ಸೋಲಾರ್ ಲ್ಯಾಂಪ್ ವಿತರಣೆ ಮತ್ತು 10 ಫಲಾನುಭವಿಗಳಿಗೆ ಮನೆ ದುರಸ್ತಿಗೆ ಚೆಕ್ ವಿತರಣೆ ಕಾರ್ಯಕ್ರಮ ನಡೆಯಿತು. ಗಿರೀಶ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿಯ ನಾಮನಿರ್ದೇಶಕ ಮಾಜಿ ಸದಸ್ಯ ಪ್ರಕಾಶ್ ಬಲಿಪ, ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಸದಸ್ಯೆ ದಿವ್ಯಶ್ರೀ ಗಿರೀಶ್ ಅಮೀನ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ರೇವತಿ ನಾಯ್ಕ್ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ನಾಗರಾಜ್ ನಿರೂಪಣೆ ಮಾಡಿದರು.









































