ಇಂದು ಕಾಶ್ಮೀರದ ಶಾರದಾ ಪೀಠದಲ್ಲಿ ಶಾರದೆಯ ವಿಗ್ರಹ ಪ್ರತಿಷ್ಠಾಪನೆ

ಶೃಂಗೇರಿ ಮಠದಿಂದ ಒಯ್ದ ವಿಗ್ರಹ

ಶ್ರೀನಗರ : ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯಿರುವ ಶಾರದಾಪೀಠದಲ್ಲಿ ಶಾರದೆಯ ವಿಗ್ರಹ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮ ಇಂದು ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಲ್ಲಿಯಿಂದ ವಚುವಲ್‌ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1947ರಲ್ಲಿ ಕಾಶ್ಮೀರವನ್ನು ಆಕ್ರಮಿಸಿದ ಪಾಕಿಸ್ಥಾನದ ಮತಾಂಧರು ಶಾರದಾ ಪೀಠ ಮತ್ತು ಅದರ ಪಕ್ಕದಲ್ಲಿದ್ದ ಗುರುದ್ವಾರವನ್ನು ನಾಶ ಮಾಡಿದ್ದರು. ಇದೀಗ 76 ವರ್ಷಗಳ ಬಳಿಕ ಕುಪ್ವಾರದ ತೀತ್ವಾಲ್‌ನಲ್ಲಿರುವ ದೇವಿಯ ದೇವಾಲಯವನ್ನು ಪುನರ್‌ ನಿರ್ಮಿಸಲಾಗಿದೆ.
ವಿಶೇಷವೆಂದರೆ ಶಾರದೆಯ ವಿಗ್ರಹವನ್ನು ಶೃಂಗೇರಿ ಮಠದಿಂದ ಇಲ್ಲಿಗೆ ತರಲಾಗಿದೆ. ಕಾಶ್ಮೀರದಲ್ಲಿ ನವರೇಹ್‌ ಎಂದು ಕರೆಯಲ್ಪಡುವ ಹಿಂದುಗಳ ವರ್ಷಾರಂಭದ ಯುಗಾದಿ ದಿನವೇ ಶಾರದೆಯ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದ ಶೃಂಗೇರಿ ಮಠದ 100 ಮಂದಿ ಅರ್ಚಕರು ಕಾಶ್ಮೀರಕ್ಕೆ ತೆರಳಿದ್ದಾರೆ.
ದೇಶ ವಿಭಜನೆಯ ಮೊದಲು ಟೀಟ್ವಾಲ್ ಶಾರದಾ ದೇವಿಯ ದೇವಾಲಯದ ಐತಿಹಾಸಿಕ ಮೂಲ ನೆಲೆಯಾಗಿತ್ತು. 1947ರಲ್ಲಿ ಕಿಶನ್‌ಗಂಗಾ ನದಿಯ ದಡದಲ್ಲಿರುವ ದೇವಾಲಯ ಮತ್ತು ಪಕ್ಕದ ಗುರುದ್ವಾರವನ್ನು ಮುಸ್ಲಿಮ್‌ ದಾಳಿಕೋರರು ನಾಶಪಡಿಸಿದ್ದರು.

error: Content is protected !!
Scroll to Top