ಬಾರಾಡಿ ರಸ್ತೆ ಸರಿಪಡಿಸುವಂತೆ ಗುತ್ತಿಗೆದಾರರ ವಿರುದ್ಧ ಸ್ಥಳೀಯರ ಪ್ರತಿಭಟನೆ

ಕಾರ್ಕಳ : ಬಾರಾಡಿ ರಸ್ತೆಯ ಅಂಚು ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯರು ದಿಲೀಪ್‌ ಬಿಲ್ಡ್‌ಕಾನ್‌ ಕಂಪೆನಿ ವಿರುದ್ಧ ಮುರಂತಗುಡ್ಡೆ ಎಂಬಲ್ಲಿ ಮಾ. 13ರಂದು ಲಾರಿ ತಡೆಹಿಡಿದು ಪ್ರತಿಭಟನೆ ನಡೆಸಿದರು. ರಸ್ತೆಯಂಚು ಸರಿಪಡಿಸಿಕೊಡುವುದಾಗಿ ಗುತ್ತಿಗೆ ವಹಿಸಿರುವ ದಿಲೀಪ್‌ ಬಿಲ್ಡ್‌ಕಾನ್‌ ಕಂಪೆನಿಯವರು ಈ ಹಿಂದೆ ತಿಳಿಸಿದ್ದರು. ಆದರೆ, ಇಲ್ಲಿ ತನಕ ರಸ್ತೆ ಸರಿಪಡಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಗಿರೀಶ್‌, ರಂಜಿತ್‌, ಪಾಶ್ವನಾಥ್‌, ಸಂದೇಶ್ ಹೇಳಿದರು.‌
ಪ್ರತಿದಿನ ಮುಂಜಾನೆ 3:30ರಿಂದಲೇ ಬೃಹತ್‌ ಪ್ರಮಾಣದ ಲಾರಿಗಳು ಕಲ್ಲು ಹೇರಿಕೊಂಡು ಸಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ತೊಂದೆಯಾಗುತ್ತಿದೆ. ಇಡೀ ಪರಿಸರ ಧೂಳಿನಿಂದ ಆವೃತ್ತವಾಗುತ್ತಿದೆ ಎಂದವರು ತಿಳಿಸಿದ್ದರು.

ಭರವಸೆ
ಪ್ರತಿಭಟನಾ ಸ್ಥಳಕ್ಕೆ ದಿಲೀಪ್‌ ಬಿಲ್ಡ್‌ಕಾನ್‌ ಕಂಪೆನಿ ಸಿಬ್ಬಂದಿ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಅತಿ ಶೀಘ್ರವಾಗಿ ರಸ್ತೆ ಅಭಿವೃದ್ಧಿಪಡಿಸಿಕೊಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಬಾರಾಡಿ, ಪರಪ್ಪಾಡಿ ಗ್ರಾಮದ ಸುಮಾರು 35 ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.















































































error: Content is protected !!
Scroll to Top