ಮಾ.7: ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ವಿಸ್ತರಿತ ಸೌಲಭ್ಯ ಉದ್ಘಾಟನೆ

ಹೊಸ ಹೊರರೋಗಿ ವಿಭಾಗ-ಶಸ್ತ್ರಚಿಕಿತ್ಸಾ ಕೊಠಡಿ ಸೇರ್ಪಡೆ

24*7 ಎಮರ್ಜೆನ್ಸಿ ಮತ್ತು ಟ್ರೋಮಾ ಸೌಲಭ್ಯ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು

ಕಾರ್ಕಳ : ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯನ್ನು ಹೊಸ ಸೌಲಭ್ಯಗಳನ್ನು ಸೇರಿಸಿಕೊಂಡೆಉ ಮೇಲ್ದರ್ಜೇಗೇರಿಸಲಾಗಿದ್ದು, ಹೊಸ ಸೌಲಭ್ಯಗಳ ಉದ್ಘಾಟನೆ ಮಾ.7ರಂದು ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಅವರು,ವಿಸ್ತರಿಸಿದ ಆಸ್ಪತ್ರೆಯ ರೊ| ಕೆ. ಕೃಷ್ಣ ಪ್ರಭು ಒಪಿಡಿ ಬ್ಲಾಕ್ ಮತ್ತು ಹೊಸ ಆಪರೇಷನ್ ಥಿಯೇಟರ್ ಕಾಂಪ್ಲೆಕ್ಸ್ ಅನ್ನು ಮಾ.7 ರಂದು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಾಗುವುದು. ಡಾ ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಹೃದಯಭಾಗದಲ್ಲಿದ್ದು, ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಿಶ್ವಾಸಾರ್ಹ ಮತ್ತು ನಂಬುಗೆಯ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ., ಮಾಹೆಯ ಸಹ ಉಪಕುಲಪತಿಗಳು ಡಾ. ಶರತ್ ಕುಮಾರ್ ರಾವ್, ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ| ಎಂ. ಡಿ. ವೆಂಕಟೇಶ್ ಗೌರವ ಅತಿಥಿಗಳಾಗಿ ಭಾಗವಹಿಸುತ್ತಾರೆ. ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ರೋಟರಿ ಸ್ನೇಹಿತರು ಹಾಗೂ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಏನೇನು ಸೌಲಭ್ಯ?

ಹೊಸದಾಗಿ ವಿಸ್ತರಿಸಿದ ಕಾರ್ಕಳ ಆಸ್ಪತ್ರೆಯಲ್ಲಿ ಆಧುನಿಕ ಆಪರೇಷನ್ ಥಿಯೇಟರ್ ಮತ್ತು 24*7 ಎಮರ್ಜೆನ್ಸಿ ಮತ್ತು ಟ್ರೋಮಾ ಸೌಲಭ್ಯ, ರೋಗ ನಿರ್ಣಯದ ಅತ್ಯಾಧುನಿಕ ಉಪಕರಣಗಳು ಮತ್ತು ಸುಸಜ್ಜಿತ ಐಸಿಯು ಸೌಲಭ್ಯ ಸೇರಿದಂತೆ ಎಲ್ಲ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಉಪಕರಣಗಳು ಇವೆ.
ಆಸ್ಪತ್ರೆಗೆ ಹೊಸ ವೈದ್ಯಕೀಯ ಸೇವೆಗಳನ್ನು ಸೇರಿಸಲಾಗಿದೆ. ಸಾಮಾನ್ಯ ಶಸ್ತ್ರಚಿಕಿತ್ಸ ವಿಭಾಗ ಮತ್ತು ಮೂಳೆ ಶಸ್ತ್ರಚಿಕಿತ್ಸ ವಿಭಾಗ ಈಗ ಲಭ್ಯವಿರುವ ಹೊಸ ಸೇವೆಗಳು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಹೃದಯಶಾಸ್ತ್ರ, ನರರೋಗ ಶಾಸ್ತ್ರ, ಕ್ಯಾನ್ಸರ್ (ಸರ್ಜಿಕಲ್ ಕ್ಯಾನ್ಸರ್ ಮತ್ತು ಪ್ರಶಾಮಕ ಚಿಕಿತ್ಸೆ) ಮತ್ತು ಮೂತ್ರಪಿಂಡ ಶಾಸ್ತ್ರದ ಸೂಪರ್ ಸ್ಪೆಷಾಲಿಟಿ ವಿಭಾಗಗಳ ಸಲಹೆಗಾರರ ನಿಯಮಿತವಾಗಿ ಭೇಟಿ ನೀಡುತ್ತಾರೆ. ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ನೇತ್ರ ಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಇಎನ್‌ಟಿ, ಅರಿವಳಿಕೆ ಮತ್ತು ಚರ್ಮ ರೋಗ ವಿಭಾಗಗಳ ಸೌಲಬ್ಯಗಳನ್ನು ಮೇಲ್ದಜೇಗೇರಿಸಲಾಗಿದೆ. ನುರಿತ ವೈದ್ಯರು ಮತ್ತು ವೃತ್ತಿಪರರ ತಂಡ ರೋಗಿಗಳ ಆರೈಕೆಗೆ ಲಭ್ಯವಿದೆ.
ಮೇಲ್ದರ್ಜೆಗೇರಿಸಿದ ಲ್ಯಾಬ್ ಸೌಲಭ್ಯವನ್ನು ಹೊಂದಿದ್ದು, ಮನೆಯಿಂದ ಮಾದರಿ ಸಂಗ್ರಹಿಸುವ ಸೇವೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯವನ್ನು ಹೊಂದಿದೆ. ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ 2 ವರ್ಷಗಳಿಂದ ಡಯಾಲಿಸಿಸ್ ಸೌಲಭ್ಯವನ್ನು ನೀಡುತ್ತಿದ್ದು, ತಿಂಗಳಿಗೆ ಸುಮಾರು 200 ಡಯಾಲಿಸಿಸ್ ನಡೆಸುತ್ತಿದೆ.

ಕೈಗೆಟಕುವ ದರದಲ್ಲಿ ಚಿಕಿತ್ಸೆ

ಕಾರ್ಕಳ ಮತ್ತು ಸುತ್ತಮುತ್ತಲಿನ ಪರಿಸರದ ಜನರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೇವೆಯನ್ನು ನೀಡುವ ಬದ್ಧತೆಯನ್ನು ಆಸ್ಪತ್ರೆ ಹೊಂದಿದೆ. ಹೊಸ ಸೌಲಭ್ಯಗಳು, ಉಪಕರಣಗಳು ಮತ್ತು ಸೇವೆಗಳೊಂದಿಗೆ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ರೋಗಿಗಳು ಉತ್ತಮ ಗುಣಮಟ್ಟದ ಆರೈಕೆಯನ್ನು ಪಡೆಯುವುದಕ್ಕೆ ನಮ್ಮ ಆದ್ಯತೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮಾರ್ಕೆಟಿಂಗ್ ಮುಖ್ಯಸ್ಥ ಸಚಿನ್ ಕಾರಂತ್, ಮಣಿಪಾಲದ ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಶೆಟ್ಟಿ, ಕಾರ್ಕಳ ಆಸ್ಪತ್ರೆಯ ಮ್ಯಾನೇಜರ್ ನಟೇಶ್ ಕುಮಾರ್ ಉಪಸ್ಥಿತರಿದ್ದರು.







































































error: Content is protected !!
Scroll to Top