ಕಾರ್ಕಳ : ಹಯಾತುಲ್ ಇಸ್ಲಾಂ ಎಸೋಸಿಯೇಶನ್ ಹಾಗೂ ತ್ವೈಭಾ ಗಾರ್ಡನ್ ಬಂಗ್ಲೆಗುಡ್ಡೆ ಆಶ್ರಯದಲ್ಲಿ ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ಮಾ. 3ರಿಂದ 5ರವರೆಗೆ ಸ್ವಲಾತ್ ಸಮ್ಮೇಳನ ಜರುಗಲಿದೆ.
ಮಾ.3 ರಂದು ಮಗ್ರಿಬ್ ನಮಾಜ್ ನಂತರ ಅಸ್ಸಯ್ಯಿದ್ ಹಸನ್ ಅಬ್ದುಲ್ಲಾಹಿ ಅಸ್ಸಖಾಫ್ ಇಂಬಿಚ್ಚಿಕೋಯ ತಂಙಳ್ ಅದೂರುರವರ ದುಶಃ ಆಶಿರ್ವಚನದೊಂದಿಗೆ ಬಂಗ್ಲೆಗುಡ್ಡೆ ತ್ವೈಭಾ ಗಾರ್ಡನ್ನ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲಿ ಕಿಲ್ಲೂರು ಉದ್ಘಾಟನೆ ಮಾಡಲಿರುವರು. ಕೆಜಿಎನ್ ದಅವಾ ಕಾಲೇಜು ಮಿತ್ತೂರು ಇದರ ಸದರ್ ಮುಹಲ್ಲಿಮ್ ಹುಸೈನ್ ಮುಈನಿ ಅಲ್ ಅಹ್ಸನಿ ಮಾರ್ನಾಡ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಮಾ. 4ರಂದು ಖಾಜಾ ಮುಈನುದ್ದೀನ್ ಜಿಸ್ತಿ ಅಜ್ಮೀರ್ ರವರ ಪೌತ್ರ ಸಯ್ಯಿದ್ ನಿಝಾಮುದ್ದೀನ್ ಫೀರ್ ಝಾದೆ ಹುಬ್ಬಳ್ಳಿ ದುಆಃ ಆಶಿರ್ವಚನ ನೀಡಲಿದ್ದು, ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಉದ್ಘಾಟಿಸಲಿರುವರು. ಮುಖ್ಯ ಭಾಷಣಕಾರರಾಗಿ ಕಾರವಾರದ ಖಾಝಿ ಹಝ್ರತ ಮೌಲಾನಾ ಮುಫ್ತಿ ಇಷ್ ತಿಹಾಖ್ ಸಾಹೇಬ್ ಭಾಗವಹಿಸಲಿದ್ದಾರೆ.

ಮಾ. 5ರಂದು ಸ್ವಲಾತ್ ವಾರ್ಷಿಕ ಹಾಗೂ ಮದನೀಯಂ ಮಜ್ಲಿಸ್ ನಡೆಯಲಿದ್ದು ಗುರುವಾಯನಕೆರೆಯ ಅಸ್ಸಯ್ಯಿದ್ ಸಾದಾತ್ ತಂಙಳ್ ಬಾ ಅಲವಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಎಚ್.ಐ. ಇಬ್ರಾಹೀಂ ಮದನಿ ಉದ್ಘಾಟನೆ ನೆರವೇರಿಸಲಿರುವರು. ಮಂಗಳೂರಿನ ಉದ್ಯಮಿ ಶಾಕಿರ್ ಹಾಜಿ ಹೈಸಂ ಅವರು ಹಿಫ್ಳುಲ್ ಕುರ್ಆನ್ ಕಾಲೇಜು ಲೋಗೋ ಅನಾವರಣಗೊಳಿಸಲಿದ್ದಾರೆ. ಮುಖ್ಯ ಭಾಷಣ ಹಾಗೂ ಮದನೀಯಂ ಮಜ್ಜಿಸ್ ನ್ನು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಅವರು ನಡೆಸಿಕೊಡಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್, ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಮುಹಮ್ಮದ್ ಗೌಸ್ ಮಿಯ್ಯಾರು, ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ನಾಸಿರ್ ಶೇಕ್, ಕಾರ್ಕಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಉದ್ಯಮಿ ಅಬೂಬಕ್ಕರ್ ಸಿದ್ದೀಕ್, ಎಸ್ವೈಎಸ್ ಮೂಡುಬಿದ್ರೆ ಸೆಂಟರ್ ಅಧ್ಯಕ್ಷ ಅಬ್ದುಸ್ಸಲಾಂ ಮದನಿ ಗುಂಡುಕಲ್ಲು, ಎಸ್ಎಂಎ ಕಾರ್ಕಳ ವಲಯಾಧ್ಯಕ್ಷ ಎಚ್. ಸುಲೈಮಾನ್ ಬಜಗೋಳಿ, ಬದ್ರಿಯ ಜುಮ್ಮಾ ಮಸೀದಿ ಎಣ್ಣೆಹೊಳೆ ಅಧ್ಯಕ ಪಿ.ಜೆ. ರಹೀಂ ಮುಹಮ್ಮದ್, ಜಲ್ವಾ ಎ. ನೂರ್ನ ಮೌಲಾನ ಸಹೀದ್ ಅಹ್ಮದ್ ರಝಾ, ಮೌಲಾನ ಮುಫ್ತಿ ಗಲಾಂ ರಝಾ ಬರ್ಕಾತಿ, ನಮ್ಮ ನಾಡ ಒಕ್ಕೂಟದ ಕಾರ್ಕಳ ಅಧ್ಯಕ್ಷ ಶಾಕೀರ್ ಹುಸೇನ್, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಅಬ್ದುಲ್ ಖಾಲಿಕ್, ಉದ್ಯಮಿಗಳಾದ ಹೈದರ್ ಎಣ್ಣೆಹೊಳೆ, ಸಮದ್ ಖಾನ್ ಮುರತ್ತಂಗಡಿ, ಕೆ.ಸಿ.ಎಫ್ ಇಹ್ಸಾನ್ ವಿಭಾಗದ ಮುಖ್ಯಸ್ಥ ಇಕ್ಭಾಲ್ ಕಾಜೂರು, ಮೌಲಾನ ಅಬ್ದುಲ್ರಾಝಿಕ್ ರಿಝ್ವಿ, ಮೌಲಾನ ಜಂಶೀರ್ ಅಹ್ಮದ್ ಮಿಸ್ಬಾಹಿ, ಮೌಲಾನ ಆದಿಲ್ ರಝಾ, ಮೌಲಾನ ಶಾದಿಲ್ ರಝಾ, ಮೌಲಾನ ಅಶ್ಪಾಕ್ ಸಖಾಫಿ, ಎಸ್.ಜೆ.ಎಂ ಕಾರ್ಕಳ ಅಧ್ಯಕ್ಷ ಉಮರ್ ಸ ಅದಿ ಅಲ್ ಅಪ್ಳಲಿ ಹಾಗೂ ಉಡುಪಿ ಹಾಗೂ ದ.ಕ ಜಿಲ್ಲೆಯ ಪ್ರಮುಖ ಸುನ್ನಿ ವಿದ್ವಾಂಸರು, ಉಲೇಮಾ ಉಮರಾಗಳು ಭಾಗವಹಿಸಲಿದ್ದಾರೆ.






































