ನಿಟ್ಟೆ : ವಿಶ್ವಕರ್ಮ ಪೂಜೆ – ಸಾಧಕರಿಗೆ ಸನ್ಮಾನ

ಕಾರ್ಕಳ : ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ ವತಿಯಿಂದ ನಿಟ್ಟೆ ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ನಿಟ್ಟೆ ವಿಶ್ವಕರ್ಮ ಯುವ ವೇದಿಕೆಯ ಸಹಯೋಗದೊಂದಿಗೆ ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ 10ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ಜರಗಿತು. ಈ ವೇಳೆ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದ ಹೃತಿಕ್ ಆಚಾರ್ಯ ದೂಪದಕಟ್ಟೆ ಹಾಗೂ ಕುಮಾರಿ ಸೃಜಾ ಆಚಾರ್ಯ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ 60 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಬೋಳ ಪುರೋಹಿತ್ ಮಂಜುನಾಥ ಆಚಾರ್ಯ, ಕೆಮ್ಮಣ್ಣು ಶ್ರೀಮತಿ ರಮಣೀ ಸದಾಶಿವ ಆಚಾರ್ಯರನ್ನು ಗೌರವಿಸಲಾಯಿತು.
ಸಮಿತಿಯ ಅಧ್ಯಕ್ಷ ರವೀಂದ್ರ ಎಸ್. ಆಚಾರ್ಯ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ, ಸಾಣೂರು ಮುದ್ದಣ್ಣನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಚಂದ್ರ ಆಚಾರ್ಯ, ನಿಟ್ಟೆ ವಿಶ್ವಕರ್ಮ ಯುವ ವೇದಿಕೆಯ ಅಧ್ಯಕ್ಷ ಅನೂಪ್ ಆಚಾರ್ಯ, ಉಪಾಧ್ಯಕ್ಷ ಪ್ರದೀಪ್ ಆಚಾರ್ಯ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ನಿಟ್ಟೆ ಸುರೇಶ್ ಆಚಾರ್ಯ, ನಿಟ್ಟೆಗುತ್ತು ನೇಮಿರಾಜ್ ರೈ, ಬಿ.ಕೆ. ನಾಯ್ಕ್ ನಡಿಮನೆ, ರಾಧಾಕೃಷ್ಣ ಭಟ್ ಕೆಮ್ಮಣ್ಣು, ಸುರೇಶ್ ಭಟ್ ಪರಪ್ಪಾಡಿ, ಪ್ರಸಿದ್ದ ನಿರೂಪಕ ದಾಮೋದರ ಶರ್ಮಾ, ಉಡುಪಿ ಜಿಲ್ಲಾ ಬಜರಂಗದಳದ ಪ್ರಮುಖರಾಗಿರುವ ಚೇತನ್ ಪೇರಲ್ಕೆ, ಸುಧೀರ್ ನಿಟ್ಟೆ ಉಪಸ್ಥಿತರಿದ್ದರು.
ನಿಟ್ಟೆ ಶ್ರೀ ಕಾಳಿಕಾಂಬಾ ಮಹಿಳಾ ಸೇವ ಸಮಿತಿ ಅಧ್ಯಕ್ಷ ಸುಮಿತ್ರಾ ಲಕ್ಷ್ಮಣ ಆಚಾರ್ಯ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಶ್ರೀಧರ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಸಮಿತಿಯ ಉಪಾಧ್ಯಕ್ಷ ಹರ್ಷವರ್ಧನ್ ಆಚಾರ್ಯ ನಿಟ್ಟೆ ಕಾರ್ಯಕ್ರಮ ನಿರೂಪಿಸಿ, ಸಮಿತಿಯ ಕೋಶಾಧಿಕಾರಿ ಈಶ್ವರ ಬಡಿಗೇರ ವಂದಿಸಿದರು.
ಬಳಿಕ ಕಾರ್ಕಳ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ತಂಡದವರಿಂದ “ಭೀಷ್ಮ ವಿಜಯ” ಯಕ್ಷಗಾನ ತಾಳಮದ್ದಳೆ ನಡೆಯಿತು. ಪ್ರದೀಪ್‌ ಆಚಾರ್ಯ ನೇತೃತ್ವದ ಮೆಲೊಡಿ ಮ್ಯೂಸಿಕಲ್ಸ್ ನಿಟ್ಟೆ ತಂಡದ ವತಿಯಿಂದ ಸಂಗೀತ ಕಾರ್ಯಕ್ರಮ, ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.























































error: Content is protected !!
Scroll to Top