ಫುಟ್ಬಾಲ್-ತ್ರೋಬಾಲ್

ಜ್ಞಾನಸುಧಾ ಬಾಲಕ – ಬಾಲಕಿಯರ ಪಾರಮ್ಯ

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕ್ರೈಸ್ಟ್‌ ಕಿಂಗ್‌ ಪಿಯು ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಫುಟ್‌ಬಾಲ್‌ ಪಂದ್ಯಾಟದಲ್ಲಿ ಗಣಿತನಗರ ಜ್ಞಾನಸುಧಾ ಪಿಯು ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ. ಬಾಲಕರ ಫುಟ್‌ಬಾಲ್‌ ತಂಡದಿಂದ ಕಾಲೇಜಿನ ಕಾರ್ತಿಕ್‌ ವೈ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ತ್ರೋಬಾಲ್: ತ್ರೋಬಾಲ್‌ನಲ್ಲಿ ಜ್ಞಾನಸುಧಾ ಬಾಲಕ-ಬಾಲಕಿಯರ ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಮುಂಡ್ಕೂರು ವಿದ್ಯಾವರ್ಧಕ ಪಿಯು ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್‌ ಪಂದ್ಯಾಟದಲ್ಲಿ ಜ್ಞಾನಸುಧಾ ಬಾಲಕಿಯರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಬಾಲಕೀಯರ ತ್ರೋಬಾಲ್‌ ತಂಡ
ಬಾಲಕರ ತ್ರೋಬಾಲ್‌ ತಂಡ
ತ್ರೋಬಾಲ್‌ನಲ್ಲಿ ಬಾಲಕೀಯರ ತಂಡದ ಸ್ವಾತಿ ಮತ್ತು ಬಾಲಕರ ತಂಡದ ಸನತ್‌ ಉತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದಿರುತ್ತಾರೆ.




























































































































































































































error: Content is protected !!
Scroll to Top