ಹಿರಿಯ ಪ್ರಗತಿಪರ ಚಿಂತಕ ಜಿ.ರಾಜಶೇಖರ್ ನಿಧನ

ಉಡುಪಿ : ಹಿರಿಯ ಚಿಂತಕ, ಪ್ರಖರ ವಿಮರ್ಶಕ ಜಿ. ರಾಜಶೇಖರ್ ಅವರು ವಯೋಸಹಜ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಜು.20 ರಾತ್ರಿ ನಿಧನರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೋಗ್ರೆಸ್ಸಿವ್ ಸುಪ್ರಾ-ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ನರಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ 11.15ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

error: Content is protected !!
Scroll to Top