ಆರೋಗ್ಯಧಾರ – ಸರ್ವ ರೋಗವನ್ನು ಗುಣಪಡಿಸುವ ಚಂದ್ರಪ್ರಭಾ ವಟಿ

ಸರ್ವ ರೋಗಗಳಲ್ಲಿ ಬಳಸಲಾದ, ಪ್ರಮುಖವಾಗಿ ಮೂತ್ರಪಿಂಡದ ರೋಗಗಳಲ್ಲಿ ಉಪಯೋಗಿಸಲ್ಪಡುವ ಆಯುರ್ವೇದೀಯ ಔಷಧ ಚಂದ್ರಪ್ರಭಾ ವಟಿಯ ಉಪಯೋಗಗಳನ್ನು ಇವತ್ತು ತಿಳಿದುಕೊಳ್ಳೋಣ.
ಚಂದ್ರನ ಪ್ರಭೆಯ ಹಾಗೆ ಶಾಂತ ಸ್ವಭಾವ ಹೊಂದಿರುವುದರಿಂದ ಈ ಔಷಧಕ್ಕೆ ಚಂದ್ರಪ್ರಭಾ ವಟಿ ಎಂದು ಹೆಸರಿಸಲಾಗಿದೆ. ಚಂದ್ರಪ್ರಭಾವಟಿಯನ್ನು ಮೂವತ್ತಾರು ದ್ರವ್ಯಗಳನ್ನು ಬಳಸಿ ಮಾಡಲಾಗುತ್ತದೆ. ಕರ್ಪೂರ ಪ್ರಧಾನ ದ್ರವ್ಯವಾಗಿ ಬಳಸಲಾಗುತ್ತದೆ.

ಚಂದ್ರಪ್ರಭಾ ವಟಿಯ ಉಪಯೋಗಗಳು
ಆಯುರ್ವೇದದಲ್ಲಿ ಹೇಳಲಾದಂತಹ ಇಪ್ಪತ್ತು ಪ್ರಕಾರದ ಪ್ರಮೇಹಗಳಲ್ಲಿ (ಇಪ್ಪತ್ತು ಪ್ರಕಾರದ ಪ್ರಮೇಯದಲ್ಲಿ ಸಕ್ಕರೆ ಕಾಯಿಲೆ ಕೂಡ ಒಂದು), ಎಳು ಪ್ರಕಾರದ ಮೂತ್ರ ರೋಗಗಳಲ್ಲಿ ನಾಲ್ಕು ಪ್ರಕಾರದ ಮೂತ್ರಪಿಂಡ ಕಲ್ಲು, ಮೂರು ಪ್ರಕಾರದ ಮೂತ್ರ ರೋಗಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಮಲಬದ್ಧತೆ, ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಟ್ಯೂಮರ್, ಫೈಬ್ರಾಯಿಡ್, ಕ್ಯಾನ್ಸರ್, ರಕ್ತಹೀನತೆ, ಯಕೃತ್ ರೋಗ, ಜಾಂಡಿಸ್, ಬೆನ್ನು ನೋವು, ಲಿವರ್ ಸಿರೋಸಿಸ್, ಹರ್ನಿಯಾ, ಶ್ವಾಸ, ಕೆಮ್ಮು, ನೆಗಡಿ, ತ್ವಚೆಯ ರೋಗಗಳಲ್ಲಿ, ಎಗ್ಸಿಮಾ, ಪೈಲ್ಸ್, ತುರಿಕೆ, ಪ್ಲೀಹ ರೋಗಗಳಲ್ಲಿ, ಕುಷ್ಟ, ಫಿಸ್ಟುಲಾ, ದಂತ ರೋಗ, ನೇತ್ರರೋಗ, ಮುಟ್ಟಾದಾಗ ಹೊಟ್ಟೆನೋವು (ಡಿಸ್ಮೆನೋರಿಯಾ), ಶುಕ್ರ ದೋಷ, ಅರುಚಿ, ಅಜೀರ್ಣ, ಮಂದಾಗ್ನಿಯಲ್ಲಿ, ಎಲ್ಲಾ ತರಹದ ಸಂಧಿ ನೋವಿನಲ್ಲಿ ಬಳಸಲಾಗುವುದು. ಇದು ವಾತ, ಪಿತ್ತ ಹಾಗೂ ಕಫ ದೋಷವನ್ನು ಸಮತೋಲನದಲ್ಲಿಡುವುದರಿಂದ ವಾತ, ಪಿತ್ತ ಹಾಗೂ ಕಫ ರೋಗಗಳಲ್ಲಿ ಚಂದ್ರಪ್ರಭಾವಟಿಯನ್ನು ಬಳಸುತ್ತಾರೆ. ಇದು ವೃಷ್ಯ ಹಾಗೂ ರಸಾಯನ (ವೃದ್ಧಾಪ್ಯವನ್ನು ದೂರ ಮಾಡುವ) ಗುಣ ಹೊಂದಿದೆ.

ಪ್ರಮಾಣ (ಡೋಸೇಜ್) – ಒಂದು ಅಥವಾ ಎರಡು ಟ್ಯಾಬ್ಲೆಟ್ ಗಳನ್ನು ದಿನಕ್ಕೆ ಒಂದು ಅಥವಾ ಎರಡು ಸಲ ಬಿಸಿ ಹಾಲು ಅಥವಾ ಬಿಸಿ ನೀರಿನ ಜೊತೆ ಆಹಾರ ಸೇವಿಸುವ ಮುಂಚೆ ಅಥವಾ ಆಹಾರ ಸೇವಿಸಿದ ನಂತರ ಸೇವಿಸುವುದು. ಚಂದ್ರಪ್ರಭಾವಟಿಯನ್ನು ಒಂದು ಅಥವಾ ಎರಡು ತಿಂಗಳವರೆಗೆ ಸೇವಿಸಬಹುದು.

ಯಾರೂ ಸೇವಿಸಬಾರದು
ರಕ್ತದೊತ್ತಡ ಅಧಿಕ ತೂಕವಿರುವವರು ಇದನ್ನು ಜಾಗ್ರತೆಯಿಂದ ಸೇವಿಸಬೇಕು. ಚಂದ್ರಪ್ರಭಾವಟಿಯನ್ನು ಅಧಿಕ ಪ್ರಮಾಣದಲ್ಲಿ (ಓವರ್ ಡೋಸೇಜ್) ಸೇವಿಸಿದಲ್ಲಿ ಹೊಟ್ಟೆ ನೋವು, ಕೊಲೈಟಿಸ್, ಅಲ್ಸರ್, ಹೊಟ್ಟೆ ಉರಿ ಕಾಣಿಸಿಕೊಳ್ಳಬಹುದು. ಮಕ್ಕಳು ಇದನ್ನು ಉಪಯೋಗಿಸಬಾರದು. ವೈದ್ಯರನ್ನು ಕೇಳದೇ ಸೇವಿಸಬೇಡಿ.

ಚಂದ್ರಪ್ರಭ ವಟಿಯಲ್ಲಿ ಬಳಸಲಾದ 36 ದ್ರವ್ಯಗಳು
ಕರ್ಪೂರ, ವಚಾ, ನಾಗರಮೋಥ, ಚಿರಾಯತ್, ದೇವದಾರು, ಹರಿದ್ರಾ, ಅತಿವಿಷ, ದಾರುಹರಿದ್ರ, ಪಿಪ್ಪಲಿ ಮೂಲ, ಚಿತ್ರಕ ಮೂಲ, ತ್ರಿವೃತ್ ಮೂಲ, ದಂತಿ ಮೂಲ, ತ್ವಕ್, ಏಲಾ, ವಂಶ ಲೋಚನ, ಧಾನ್ಯಕ, ತ್ರಿಫಲಾ, ಚವ್ಯ ಮೂಲ,ವಿಡಂಗ, ಗಜ ಪಿಪ್ಪಲಿ, ಸುವರ್ಣ ಮಾಕ್ಷಿಕ ಭಸ್ಮ, ಶುಂಠಿ, ಹಿಪ್ಪಲಿ, ಮರೀಚ, ಯವಕ್ಷಾರ, ಸೈಂಧವಲವಣ, ಸೌವರ್ಚಲವಣ, ಬಿಡಲವಣ, ಲೋಹಭಸ್ಮ, ಶಿಲಾಜಿತು, ಗುಗ್ಗುಲು.

ಡಾ. ಹರ್ಷಾ ಕಾಮತ್



































































































error: Content is protected !!
Scroll to Top