ನವದೆಹಲಿ: ಮುಂದಿನ 5 ವರ್ಷಗಳಲ್ಲಿ ಭಾರತೀಯ ಸೇನೆ 50% ಗಳಷಿ ಯೋಧರು ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ಹುದ್ದೆ ಭರ್ತಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
‘ಟೂರ್ ಆಫ್ ಡ್ಯೂಟಿ’ ಹೆಸರಿನಲ್ಲಿ ಕಳೆದ ಎರಡು ವಾರಗಳಿಂದ ನೇಮಕಾತಿ ಪ್ರಕ್ರಿಯೆಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ನೇಮಕಾತಿಯಡಿ ಮೂರು ವರ್ಷಗಳ ಅವಧಿಗೆ 25% ಮಂದಿಯನ್ನು, ಮತ್ತೆ 25% ಜನರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. 50% ಜನರನ್ನು ನಿವೃತ್ತಿ ವರೆಗಿನ ಕರ್ತವ್ಯಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಸೈನಿಕ ಶ್ರೇಣಿಗೆ ಈ ಕರಡು ಅನ್ವಯವಾಗಲಿದೆ. ಅಧಿಕಾರಿಗಳ ಶ್ರೇಣಿಗೆ ಅನ್ವಯವಾಗುವುದಿಲ್ಲ ಎಂದು ಮೂಲಗಳು ಹೇಳಿವೆ.
ಯೋಧರ ಭರ್ತಿಗೆ ‘ಟೂರ್ ಆಫ್ ಡ್ಯೂಟಿ’ ನೇಮಕಾತಿ ನಡೆಸಲು ಕೇಂದ್ರ ಸರ್ಕಾರ ಚಿಂತನೆ
Recent Comments
ಕಗ್ಗದ ಸಂದೇಶ
on