Thursday, May 19, 2022
spot_img
Homeದೇಶಪಾಕಿಸ್ತಾನ‌ದ 4, ಭಾರತದ 18 ಯೂಟ್ಯೂಬ್ ಆಧರಿತ ಸುದ್ದಿ ಚಾನೆಲ್‌ಗಳನ್ನು ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ

ಪಾಕಿಸ್ತಾನ‌ದ 4, ಭಾರತದ 18 ಯೂಟ್ಯೂಬ್ ಆಧರಿತ ಸುದ್ದಿ ಚಾನೆಲ್‌ಗಳನ್ನು ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನ‌ದ 4 ಚಾನೆಲ್‌ಗಳು ಮತ್ತು ಭಾರತದ 18 ಯೂಟ್ಯೂಬ್ ಆಧರಿತ ಸುದ್ದಿ ವಾಹಿನಿಗಳನ್ನು ಬ್ಲಾಕ್ ಮಾಡುವಂತೆ ಸೂಚಿಸಿದೆ.
ಈ ವಾಹಿನಿಗಳು ಸುಳ್ಳು ಸುದ್ದಿಯನ್ನು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಬ್ಲಾಕ್ ಮಾಡುವಂತೆ ಸೂಚಿಸಲಾಗಿದೆ. 2021 ರ ಫೆಬ್ರವರಿ ತಿಂಗಳಲ್ಲಿ ಜಾರಿಯಾದ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ, ಇದೇ ಮೊದಲ ಬಾರಿ ಭಾರತೀಯ ಯೂಟ್ಯೂಬ್ ಆಧರಿತ ನ್ಯೂಸ್ ಪಬ್ಲಿಷರ್‌ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ.
ಒಟ್ಟಿನಲ್ಲಿ 2021 ರ ಡಿಸೆಂಬರ್‌ನಿಂದ ಈ ವರೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ, ಸಾರ್ವಭೌಮ‌ತೆ, ಸಮಗ್ರತೆ, ಕಾನೂನು ಸುವ್ಯವಸ್ಥೆ‌ಯನ್ನು ಕಾಪಾಡುವ ನಿಟ್ಟಿನಲ್ಲಿ ಒಟ್ಟಾರೆ 78 ಯೂಟ್ಯೂಬ್ ಆಧರಿತ ಸುದ್ದಿವಾಹಿನಿಗಳು, ಹಲವು ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧ ಮಾಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!