ಕಾರ್ಕಳ : ಯಾವ ಮುಸಲ್ಮಾನ ಸ್ವಾತಂತ್ರ್ಯ ಹೋರಾಟದಲ್ಲಿ, ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೋ ಅಂತಹ ಮುಸಲ್ಮಾನರ ಬಗ್ಗೆ ಗೌರವವಿದೆ. ಯಾವ ಮುಸಲ್ಮಾನ ತಾಯ್ನಾಡಿನ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗುತ್ತಾನೋ ಅಂತಹವರಿಗೆ ಬಹಿಷ್ಕಾರವಿದೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಎ. 3ರಂದು ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಅವರವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾವೇನೂ ಹೇಳಲ್ಲ. ಉಡುಪಿಯ 6 ಮಂದಿ ವಿದ್ಯಾರ್ಥಿಗಳಿಂದಾಗಿ ಹಿಜಾಬ್ ರಾದ್ಧಾಂತ ಸೃಷ್ಟಿಯಾಯಿತು. ಇದೀಗ ಹಲಾಲ್ ವಿಚಾರವಾಗಿ ಕೆಲವರು ವಿವಾದವುಂಟು ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಘೋಷಣೆ – ನಮ್ಮ ಸಾಧನೆ
ಕಾಂಗ್ರೆಸ್, ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸೀಟ್ ಟಾರ್ಗೆಟ್ ಮಾಡಿಕೊಂಡಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 26 ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿಕೊಂಡಿದ್ದರು. ಅವರಿಂದ 1 ಸ್ಥಾನ ಮಾತ್ರ ಗೆಲ್ಲುವಂತಾಯಿತು. ಹಾಗಾಗಿ ಅವರ ಘೋಷಣೆಗೆ ಮಹತ್ವ ನೀಡಬೇಕಂತಿಲ್ಲ. ನಾವು ಅಭಿವೃದ್ಧಿ ಕಾರ್ಯ, ಸಾಧನೆ ಮೂಲಕವೇ ಹೆಚ್ಚಿನ ಸೀಟ್ ಪಡೆಯುತ್ತೇವೆ ಎಂದರು.
ಮುಸಲ್ಮಾನರ ಬಗ್ಗೆ ವಿರೋಧ ಇಲ್ಲ – ಸಚಿವ ಈಶ್ವರಪ್ಪ































