ಕಾರ್ಕಳ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ದಾನವೆ ರಕ್ತದಾನ. ಉಡುಪಿ ಜಿಲ್ಲೆ ರಕ್ತದಾನದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯು ಹಲವು ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ ಎಂದು ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಾ ವೈದ್ಯರಾದ ಡಾ. ಮಧುಸೂದನ ನಾಯಕ್ ಕಾರ್ಕಳದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿರುವ ರೆಡ್ ಕ್ರಾಸ್ ಸಪ್ತಾಹದ ಅಂಗವಾಗಿ ಏಪ್ರಿಲ್ 3 ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಭಾಪತಿ ಡಾಕ್ಟರ್ ಕೆ. ರಾಮಚಂದ್ರ ಜೋಶಿ ಅವರು ಮಾತನಾಡಿ, ಕಾರ್ಕಳದಲ್ಲಿ ರೆಡ್ ಕ್ರಾಸ್ ಸಂಸ್ಥೆ ಆರಂಭವಾದ ಬಳಿಕ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿದೆ. ಸಂಸ್ಥೆ ಆರಂಭವಾಗಿ ಕಳೆದ 4 ವರ್ಷಗಳಲ್ಲಿ ಸುಮಾರು 2,000 ಯೂನಿಟ್ ರಕ್ತ ಸಂಗ್ರಹಿಸಿದೆ. ಇದರಿಂದ ಸುಮಾರು 5,000 ಕ್ಕೂ ಮಿಗಿಲಾದ ಜನರಿಗೆ ಪ್ರಯೋಜನವಾಗಿದೆ ಎಂದರು. ಕುಂದಾಪುರ ಶಾಖೆ ಸಭಾಪತಿ ಜಯಕರ ಶೆಟ್ಟಿ, ಕೋಶಾಧಿಕಾರಿ ಶಿವರಾಂ ಶೆಟ್ಟಿ, ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್, ಕುಕ್ಕುಂದೂರು ಗಣಿತ ನಗರ ಅಜೆಕಾರು ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ವೃಷಭ ರಾಜ್ ಕಡಂಬ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ತೊಂಜಿಕಟ್ಟೆ ವನಜಾ ಪೂಜಾರ್ತಿ, ನಿಟ್ಟೆ ಪದವು ನಿವಾಸಿ ದೇವು, ಬೇಲಾಡಿಯ ಸಂಪ ಮೂಲ್ಯ, ಕಾರ್ಕಳ ನಗರ ನಿವಾಸಿ ಮಾಧವ ಶೆಟ್ಟಿಗಾರ್ ಮತ್ತು ಬೆಳ್ವೆಯ ಸದಿಯಾ ಅವರಿಗೆ ತಲಾ 10 ಸಾ. ರೂ. ಮೌಲ್ಯದ ವೀಲ್ ಚೇರ್ ವಿತರಿಸಲಾಯಿತು. 4 ವರ್ಷಗಳ ಕಾಲ ಅಧ್ಯಕ್ಷರಾಗಿ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ ಡಾಕ್ಟರ್ ರಾಮಚಂದ್ರ ಜೋಶಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಉಪಸಭಾಪತಿ ಶೇಖರ್ ಹೆಚ್. ಸ್ವಾಗತಿಸಿ, ಶ್ವೇತಾ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Recent Comments
ಕಗ್ಗದ ಸಂದೇಶ
on