ನವದೆಹಲಿ: ಭಾರತದಲ್ಲಿ ನಕಲಿ ನೋಟುಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡ ಬಳಿಕ ಸುಮಾರು 92 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ನೋಟುಗಳನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡಿದೆ ಎಂದು ಸರ್ಕಾರ ತಿಳಿಸಿದೆ.
ಈ ಸಂಬಂಧ ಕೇಂದ್ರ ಸಚಿವ ನಿತ್ಯಾನಂದ ರೈ ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದು, 2016 – 20 ರ ನಡುವಿನ ಅವಧಿಯಲ್ಲಿ 92 ಕೋಟಿಗೂ ಅಧಿಕ ಮೌಲ್ಯಗಳ ನಕಲಿ ನೋಟುಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಿದೆ.
ದೇಶದಲ್ಲಿ ಖೋಟಾ ನೋಟುಗಳಿಗೆ ಬ್ರೇಕ್ ಹಾಕುವ ಹಿನ್ನೆಲೆಯಲ್ಲಿ 500, 1000 ರೂ ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿತ್ತು. ಅದಾದ ಬಳಿಕ 500 ಮತ್ತು 2000 ರೂ. ಗಳ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. 1967 ರ ಕಾಯ್ದೆಯನ್ವಯ ದೇಶದಲ್ಲಿ ಕಳ್ಳ ನೋಟುಗಳ ಉತ್ಪಾದನೆ, ಕಳ್ಳ ಸಾಗಾಣಿಕೆ, ಚಲಾವಣೆಯನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಲಾಗಿದೆ. ಹಾಗೆಯೇ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿಯೂ ತಿಳಿದುಬಂದಿದೆ.
2016 -20 ರ ಅವಧಿಯಲ್ಲಿ 92 ಕೋಟಿಗೂ ಹೆಚ್ಚು ನಕಲಿ ನೋಟು ಕೇಂದ್ರ ಸರ್ಕಾರದ ವಶಕ್ಕೆ
















































































