ಹೆಬ್ರಿ: ಶಿವಮೊಗ್ಗದಿಂದ ಉಡುಪಿಗೆ ಹೋಗುವ ಖಾಸಗಿ ಮಿನಿ ಬಸ್ಸೊಂದು ಬುಧವಾರ ಬೆಳಿಗ್ಗೆ ಮರಕ್ಕೆ ಗುದ್ದಿ, ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಹೆಬ್ರಿಯ ಎಸ್ ಆರ್ ಸ್ಕೂಲ್ ಕಿನ್ನಿಗುಡ್ಡೆ ಸಮೀಪ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ.
ಬಸ್ಸಿನ ಸ್ಟೇರಿಂಗ್‌ನ ಎಂಡ್ ತುಂಡರಿಸಲ್ಪಟ್ಟ ಪರಿಣಾಮ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 3- 4 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಹೆಬ್ರಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಮರಕ್ಕೆ ಗುದ್ದಿದ ಬಸ್ – ಪ್ರಯಾಣಿಕರಿಗೆ ಗಾಯ
Recent Comments
ಕಗ್ಗದ ಸಂದೇಶ
on