ಕಾರ್ಕಳ : ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ ಆದಿ ಆಲಡೆ ಕ್ಷೇತ್ರದಲ್ಲಿ ಜ. 25ರಿಂದ ಜ.30ರ ತನಕ ತೃತೀಯ ವಾರ್ಷಿಕ ಉತ್ಸವ ಹಾಗೂ ಸಿರಿಜಾತ್ರೆ ನಡೆಯಲಿದೆ.
ಜ. 25ರ ಸಂಜೆ 6ರಿಂದ ವೈದಿಕ ಕಾರ್ಯ ಹಾಗೂ ಮಹಾಪೂಜೆ, ಜ. 26ರ ಬೆಳಿಗ್ಗೆ ತೋರಣ ಮುಹೂರ್ತ, ಧ್ವಜಾರೋಹಣ ಮಧ್ಯಾಹ್ನ ಅನ್ನಸಂತರ್ಪಣೆ. ಸಂಜೆ 5.30ರಿಂದ ಉತ್ಸವ ಬಲಿ, ಮಹಾರಂಗಪೂಜೆ, ಜ. 27ರ ಬೆಳಿಗ್ಗೆ 4ರಿಂದ ಜಗನ್‌ಮೋಹನ ಗಣಪತಿ ಹೋಮ, 11 ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಅನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಉತ್ಸವ ಬಲಿ, ಹಾಗೂ ಮಹಾಪೂಜೆ ನೆರವೇರಲಿದೆ.
ಜ.28ರ ರಾತ್ರಿ 8 ಗಂಟೆಗೆ ಉತ್ಸವ ಬಲಿ, ಆಲಡೆ ಕ್ಷೇತ್ರದಲ್ಲಿ ಅಬ್ಬಗ ದಾರಗ ಸಹಿತ ಕುಮಾರ ದರ್ಶನ ಸೇವೆ, ರಾತ್ರಿ 8.30ರಿಂದ ಸಿರಿ ಜಾತ್ರೆ, ಜ.29ರ ಬೆಳಿಗ್ಗೆ ಗೋಪೂಜೆ, ಕವಟೋದ್ಘಾಟನೆ, ತುಲಾಭಾರ ಸೇವೆ, ವಿವಿಧ ತಂಡಗಳಿಂದ ಭಜನೆ, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ಹೂವಿನ ಪೂಜೆ, ಉತ್ಸವ ಬಲಿ, ತೀರ್ಥಸ್ನಾನ, ತೂಟೆಧಾರಣೆ, ಜಳಕದ ಬಲಿ, ಧ್ವಜಾವರೋಹಣ, ಜ. 30ರ ಬೆಳಿಗ್ಗೆ ಪಂಚಾಮೃತ ಸಹಿತ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಸಂಪ್ರೋಕ್ಷಣೆ ಜರುಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ, ಅರ್ಚಕ ರಾಘವೇಂದ್ರ ಭಟ್, ತೆಳ್ಳಾರು ಗುತ್ತು/ ಬರ್ಕೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜ. 25ರಿಂದ 30 : ತೆಳ್ಳಾರು ಶ್ರೀ ಮಹಾಗಣಪತಿ, ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ ಆದಿ ಆಲಡೆ ಕ್ಷೇತ್ರ ವಾರ್ಷಿಕ ಉತ್ಸವ











