ಕಾರ್ಕಳದಲ್ಲಿ ಮತ್ತೆ ದನ ಕಳ್ಳತನ : ಸೋಮವಾರ ಈದುವಿನಿಂದ 45 ಸಾವಿರ ರೂ. ಮೌಲ್ಯದ ಮೂರು ದನ ಕಳವು

ಕಾರ್ಕಳ : ಕಾರ್ಕಳ ಈದು ಪರಿಸರದಿಂದ ಮೂರು ದನ ಕಳವಾದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈದು ಗ್ರಾಮದ ಗಾಂದ್ಯೊಟ್ಟು ಹೊಸಮನೆ ಶಶಿಕಲಾ ಎಂಬವರ ಮನೆ ಹೊರಗಡೆ ಕಟ್ಟಿ ಹಾಕಿದ್ದ ಮೂರು ದನಗಳನ್ನು ಜ. 23ರಂದು ರಾತ್ರಿ ಕಳ್ಳರು ಹೊತ್ತೊಯ್ದಿರುತ್ತಾರೆ. ಕಳವಾದ ದನಗಳ ಮೌಲ್ಯ 45,000 ರೂ. ಆಗಿದ್ದು, ಈ ಕುರಿತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಅವರು ದೂರು ದಾಖಲಿಸಿದ್ದಾರೆ.





























































































error: Content is protected !!
Scroll to Top