ಗಣರಾಜ್ಯೋತ್ಸವ ಪರೇಡ್ ಸ್ತಬ್ಧ ಚಿತ್ರದಲ್ಲಿ ಕಸೂತಿ ಪ್ರದರ್ಶನ ಸಂಡೂರು ಲಂಬಾಣಿ ಮಹಿಳೆಯರಲ್ಲಿ ಸಂತಸ

ಹುಬ್ಬಳ್ಳಿ : ಜ.26 ರ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ರಾಜ್ಯದ ಸಂಡೂರಿನ ಕಸೂತಿಗಳು ಪ್ರದರ್ಶನಗೊಳ್ಳಲಿದ್ದು ಸಂಡೂರಿನ ಲಂಬಾಣಿ ಮಹಿಳೆಯರು ಅತೀವ ಸಂತಸಗೊಂಡಿದ್ದಾರೆ. ಬಟ್ಟೆಗಳು, ಸೀರೆ, ಶಾಲುಗಳ ಮೇಲೆ ಲಂಬಾಣಿ ಮಹಿಳೆಯರ ಉತ್ತಮ ಕಸೂತಿ ಕೆಲಸಗಳಿಗೆ ಸಂಡೂರು ರಾಜಮನೆತನದ ಎಂ ವೈ ಘೋರ್ಪಡೆ ಅವರು ಸಂಡೂರು ಕುಶಲ ಕಲಾ ಕೇಂದ್ರ ಎಂಬ ಸ್ವ-ಸಹಾಯ ತಂಡವನ್ನು ಸ್ಥಾಪಿಸಿದ್ದರು. ಸಂಡೂರಿನ ಕಸೂತಿಗಳು ಪ್ರದರ್ಶನಗೊಳ್ಳುತ್ತಿರುವುದು ಕೇಂದ್ರದ ಕುಶಲ ಕರ್ಮಿಗಳಿಗೆ ಗೌರವ ಮತ್ತು ಹೆಮ್ಮೆಯನ್ನುಂಟು ಮಾಡಿದೆ. ಈ ಮೂಲಕ ಇಲ್ಲಿನ ಕಲಾಕೃತಿಗಳಿಗೆ ಉತ್ತಮ ಮನ್ನಣೆ ದೊರೆತಂತಾಗಿದೆ.































































































error: Content is protected !!
Scroll to Top